Select Size
Quantity
Product Description
ಕಾಲ ಬದಲಾದಂತೆ ಅದು ಕೂಡ ಬದಲಾಗುತ್ತದೆ. ಪ್ರಾಪ್ತರಾದವರು ಶಿಕ್ಷಣಕ್ಕೆ ಸಮಾನಾಂತರದಲ್ಲಿ ನಮ್ಮ ಸುತ್ತಲಿನ ಪ್ರಪಂಚವನ್ನು ಅರಿತುಕೊಳ್ಳುವ, ಬದುಕನ್ನು ರೂಪಿಸಿಕೊಳ್ಳುವ, ನಾವು ಸಮಾಜದ ಆಸ್ತಿಯಾಗುವ ದಿಸೆಯಲ್ಲಿ ಮುನ್ನಡೆಯಬೇಕು. ನಮ್ಮ ಬದುಕಿನ ವಿವಿಧ ಮಜಲುಗಳಲ್ಲಿ ನಮಗಿರುವ ಸಮಯವನ್ನು ಅನಗತ್ಯ ವಿಷಯಗಳಲ್ಲಿ ವಿನಿಯೋಗಿಸಿ ವ್ಯರ್ಥಮಾಡಿದರೆ ಬದುಕಿನ ಮುಂದಿನ ಹಂತಗಳಲ್ಲಿ ಅದರಿಂದ ಯಾವುದೇ ಪ್ರಯೋಜನವಾಗದು. ‘ಸಮಯ ಮತ್ತು ಸಮುದ್ರದ ಅಲೆಗಳು ಯಾರಿಗಾಗಿಯೂ ಕಾಯುವುದಿಲ್ಲ’ ಎಂಬ ಗಾದೆ ಮಾತು ಗಮನೀಯವಾಗಿದೆ. ಕಳೆದು ಹೋದ ಸಮಯ ನಮ್ಮಲ್ಲಿ ಆಳವಾದ ವಿಷಾದವನ್ನು ಮಾತ್ರ ಉಳಿಸಿ ಹೋಗುತ್ತದೆ. ಸುಖಾಸುಮ್ಮನೆ ಯಾವುದೋ ಭ್ರಾಂತಿಗಳ ಸುಳಿಗಳಲ್ಲಿ ಸಿಲುಕಿ ನಾವು ನಮಗಾಗಿ ನೀಡಬೇಕಾದ ಸಮಯವನ್ನು ನೀಡದೇ ಹೋದರೆ ಅತ್ಯಮೂಲ್ಯವಾದ ಮಾನವಸಂಪನ್ಮೂಲದ ಸೋರಿಕೆಯಾಗಿ ಬದುಕು ವ್ಯರ್ಥವಾಗುತ್ತದೆ. ಪಶ್ಚಾತಾಪಕ್ಕೆ ಕಾರಣವಾಗುತ್ತದೆ. ನಮ್ಮ ಸಮಯವನ್ನು ನಮಗಾಗಿ ಹೆಚ್ಚು ಸಮರ್ಥವಾಗಿ ನಿರ್ವಹಿಸಿಲು ನಾವು ನಮ್ಮ ಮನಸ್ಸನ್ನು ಸಿದ್ಧಗೊಳಿಸಬೇಕು. ಬದುಕು ಒಂದು ಒರತೆಯಿದ್ದಂತೆ. ನಿರ್ದಿಷ್ಟ ಸಮಯದಲ್ಲಿ ಮಾತ್ರವೇ ಉತ್ಕೃಷ್ಟ ನೀರು ದೊರಕುತ್ತದೆ. ಮತ್ತೆ ಬಹಳಷ್ಟು ಬಾರಿ ಅದು ಸಾಧ್ಯವಾಗದೇ ಹೋಗುತ್ತದೆ ಎಂಬ ಅರಿವು ನಮಗಿರಬೇಕು. ‘ಮಾನವ ಜನ್ಮ ದೊಡ್ಡದು ಅದನ್ನು ಹಾಳು ಮಾಡಲು ಬೇಡಿ ಹುಚ್ಚಪ್ಪಗಳಿರಾ’ ಎಂಬ ದಾಸರ ಮಾತಿನಂತೆ ಕಾಲದ ಅಗತ್ಯ ಮತ್ತು ಅದರ ಮಹತ್ವನ್ನು ಅರಿತುಕೊಂಡು ಸಮಯವನ್ನು ನಮಗಾಗಿ ಶ್ರದ್ಧೆಯಿಂದ ಉಪಯೋಗಿಸಿಕೊಳ್ಳುವ, ಅದನ್ನು ನಮ್ಮ ಪ್ರಗತಿಗಾಗಿ ದುಡಿಸಿಕೊಳ್ಳುವ ಪ್ರವೃತ್ತಿಯನ್ನು ನಮ್ಮದಾಗಿಸಿಕೊಂಡರೆ ಬದುಕು ಸಾರ್ಥಕತೆಯ ದಡ ಸೇರುತ್ತದೆ
Width
15 CMS
Length
22 CMS
Weight
100 GMS
Height
1 CMS
Publication Year
2022
Author
Mahadeva Basarakoda
Number of Pages
136
Publisher
Panchami Media Publications
ISBN-13
9788195489220
Binding
Soft Bound
Language
Kannada