Select Size
Quantity
Product Description
ಲೇಖಕ ಜಿ. ರಾಮನಾಥ ಭಟ್ ಅವರು ರಚಿಸಿದ ಕೃತಿ-ಗುರುದೇವ, ಪುಸ್ತಕ -2. ರವೀಂದ್ರನಾಥ ಟ್ಯಾಗೋರ ಅವರ ಕುರಿತು ರವೀಂದ್ರ ಗದ್ಯಸಂಚಯ, ರವೀಂದ್ರ ಕಾವ್ಯಸಂಚಯ, ನವಯುಗದ ಚೈತನ್ಯ, ಗುರುದೇವ ಮತ್ತು ಮಹಾತ್ಮ, ಹೀಗೆ ರವೀಂದ್ರರ ಕುರಿತು ಸಾಹಿತ್ಯ ರಚಿಸಿರುವ ಲೇಖಕರು, ಗುರುದೇವ ಶೀರ್ಷಿಕೆಯಡಿ ಬರೆಯುತ್ತಿರುವ ಎರಡನೇ ಪುಸ್ತಕವಿದು. ಹದಿವಯಸ್ಸಿನಿಂದ ವೃದ್ಯಾಪ್ಯದವರೆಗಿನ ಪ್ರಮುಖ ಘಟನೆಗಳನ್ನು, ಮೈಲುಗಲ್ಲುಗಳೆಂದು ಪರಿಗಣಿಸಿ ದಾಖಲಿಸಿದ ಸಂಗತಿಗಳ ವಿವರಣೆಗಳನ್ನುಈ ಕೃತಿ ಒಳಗೊಂಡಿದೆ. ರವೀಂದ್ರನಾಥ ಠಾಕೂರರು ಯೌವನದಲ್ಲೇ ಕವಿಯಾಗಿ, ನಾಟಕಕಾರರಾಗಿ ಕಥೆಗಾರರಾಗಿ ತಮ್ಮ ಇರವನ್ನು ಸ್ಥಿರಪಡಿಸಿಕೊಂಡಿದ್ದರು. ರವೀಂದ್ರರ ವಿವಾಹ, ಮಕ್ಕಳು, ಕುಟುಂಬ ಜೀವನದೊಂದಿಗೆ ಅವರ ಸೃಜನಶೀಲತೆಯೂ ವಿಸ್ತಾರಗೊಂಡಿತು. ಕಾದಂಬರಿಗಳನ್ನು ರಚಿಸಿದರು, ನಾಟಕ ರಚಿಸಿ ಪ್ರದರ್ಶಿಸಿದರು. ಕವಿತೆಗಳು, ಪ್ರಬಂಧಗಳು ಪ್ರಕಟವಾದವು. ಶಾಂತಿನಿಕೇತನದ ಸ್ಥಾಪನೆ, ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಕೊಂಡೇ ತಮ್ಮ ಕಾವ್ಯ ಕೃಷಿಯನ್ನು ಮುಂದುವರಿಸಿದರು. ಹಿತಶತ್ರುಗಳ ಕಿರುಕುಳ, ಅಪಮಾನ ಸಹಿಸಿಕೊಂಡರು. ಪತ್ನಿ, ಮಕ್ಕಳ, ಬಂಧುವರ್ಗದವರ ಸಾವಿನ ನೋವು, ಜೊತೆಗೆ, ಬ್ರಿಟಿಷ್ ಸರಕಾರದ ವಕ್ರದೃಷ್ಟಿ. ಸ್ವಾತಂತ್ರ್ಯ ಹೋರಾಟಗಾರರೊಂದಿಗೆ ಸಂಪರ್ಕ, ಹಲವು ಬಾರಿ ವಿದೇಶ ಪ್ರವಾಸ, ಗೀತಾಂಜಲಿಗಾಗಿ ನೊಬೆಲ್ ಪಾರಿತೋಷಕ ಪುರಸ್ಕಾರ - ಹೀಗೆ ರವೀಂದ್ರರ ಬದುಕಿನ ಹಲವು ರೋಚಕ ವಿಷಯಗಳನ್ನು ಈ ಕೃತಿಯಲ್ಲಿ ಕಾಣಿಸಲಾಗಿದೆ.
Weight
200 GMS
Length
22 CMS
Width
14 CMS
Height
2 CMS
Author
G Ramanatha Bhat
Publisher
Nava Karnataka Publications Pvt Ltd
Publication Year
2015
Number of Pages
156
ISBN-13
9788184672329
Binding
Soft Bound
Language
Kannada