Select Size
Quantity
Product Description
ಪ್ರಕೃತಿಯಲ್ಲಿನ ಜೀವಿ ವೈವಿಧ್ಯ ಎಷ್ಟೊಂದು ಸ್ವಾರಸ್ಯಕರ ಮತ್ತು ಕೌತುಕಮಯ! ಗೂಡು ಕಟ್ಟುವ ಹಕ್ಕಿಯಾಗಲೀ, ಕಾಡಿನ ಪ್ರಾಣಿ-ಸಾಕುಪ್ರಾಣಿಯಾಗಲೀ, ಭೂಮಿಯಲ್ಲಿ ಬಿಲ ತೋಡಿ ಬದುಕುವ ಜೀವಿಯಾಗಲಿ-ನಾವು ‘ಭಲೇ ನಿನ್ನ ಚಾಣಾಕ್ಷತನವೇ’ ಎನ್ನುವಂತೆ ತನ್ನತನವನ್ನು ಮೆರೆದು ನಮ್ಮನ್ನು ಮೂಕವಿಸ್ಮಿತರನ್ನಾಗಿ ಮಾಡುತ್ತವೆ. ಎಲ್ಲ ಜೀವಿಗಳೂ ಬದುಕಲು ಹೋರಾಡುತ್ತವೆ. ತಮ್ಮ ತಮ್ಮ ಆಹಾರ ಸಂಗ್ರಹಣೆಯಲ್ಲಿ ಅವು ತೋರುವ ಚಾಕಚಕ್ಯತೆ ಬೆರಗು ಮೂಡಿಸುವಂಥದು. ತಮ್ಮ ವಾಸಸ್ಥಳವನ್ನು ನಿರ್ಮಿಸಿಕೊಳ್ಳುವ ಕುಶಲತೆ ಅತ್ಯಂತ ನವಿರಾದುದು. ಸೃಷ್ಟಿಯಲ್ಲಿ ಸಹಬಾಳ್ವೆಯ ತತ್ವವನ್ನು ಅನುಸರಿಸಿ ಎಲ್ಲ ಜೀವಿಗಳೂ ಬದುಕುತ್ತವೆ. ಮನುಷ್ಯ ಪ್ರಾಣಿ ಮಾತ್ರ ಇದಕ್ಕೆ ಅಪವಾದವೆಂದರೆ ತಪ್ಪಾಗದು. ಅವನಿಂದಾಗಿ ಇಂದು ನಾವು ಅನೇಕ ಜೀವಿಗಳನ್ನು ಕೇವಲ ಚಿತ್ರಗಳಲ್ಲಿ ಮಾತ್ರ ಕಾಣುವಂತಾದದ್ದು ದುರಂತವೇ. ರೋಗ ಪತ್ತೆಗೆ, ರೋಗ ಚಿಕಿತ್ಸೆಗೆ, ಔಷಧಗಳ ಪ್ರಮಾಣೀಕರಣಕ್ಕೆ ಹಲವು ಜೀವಿಗಳನ್ನು ಬಳಸಿಕೊಂಡಿದ್ದೇವೆ. ಅವೆಲ್ಲ ಮನುಷ್ಯನಿಗೆ ಪರೋಕ್ಷವಾಗಿ ಸಹಕಾರಿ. ಪ್ರಾಣಿ-ಪಕ್ಷಿಗಳಲ್ಲದೆ ಇನ್ನಿತರ ಜೀವಿಗಳ ನಡವಳಿಕೆ ಮತ್ತು ವಿಶೇಷತೆಯನ್ನು ಇನ್ನೊಂದು ಕೌತುಕದ ಜೊತೆ ಹೋಲಿಸಿ ಸ್ವಾರಸ್ಯಕರವಾಗಿ ಬರೆದ ಈ ಕೃತಿ ಜನಮಾನ್ಯತೆ ಪಡೆಯುವಲ್ಲಿ ಸಂಶಯವಿಲ್ಲ.
Author
Dr N S Leela
Binding
Soft Bound
Number of Pages
108
Publication Year
2021
Publisher
Nava Karnataka Publications Pvt Ltd
Height
2 CMS
Length
22 CMS
Weight
200 GMS
Width
14 CMS
Language
Kannada