Product Description
೨೦೦೮ರಲ್ಲಿ ತಮ್ಮ "ಅರಮನೆ" ಕಾದಂಬರಿಗಾಗಿ ಕೇಂದ್ರ ಸಾಹಿತ್ಯ ಅಕಾಡಮಿಯ ಪ್ರಶಸ್ತಿಯನ್ನು ಗಳಿಸಿದ ಶ್ರೀ ಕುಂ. ವೀರಭದ್ರಪ್ಪ ಅವರು ಕರ್ನಾಟಕದ ಪ್ರತಿಷ್ಠಿತ ಕಾದಂಬರಿಕಾರರಲ್ಲಿ ಒಬ್ಬರಾಗಿದ್ದಾರೆ. ಇವರು ಕಥೆ ಮತ್ತು ಕಾದಂಬರಿ ಪ್ರಕಾರಗಳನ್ನೇ ತಮ್ಮ ಸಾಹಿತ್ಯಾಭಿವ್ಯಕ್ತಿಯ ಮಾಧ್ಯಮದವನ್ನಾಗಿ ಆಯ್ದುಕೊಂಡವರು ತಮ್ಮ ಸಾಧನಾ-ಸರಣಿಗಳಿಂದ ಕನ್ನಡ ಕಾದಂಬರಿ ಪ್ರಕಾರಕ್ಕೆ ಶ್ರೀಮಂತಿಕೆಯನ್ನು ತಂದುಕೊಟ್ಟಿರುವ ಲೇಖಕರಾಗಿ ಸ್ತುತ್ಯರೂ, ಅಭಿನಂದನೀಯರೂ ಆಗಿದ್ದಾರೆ. ’ಸಂದೇಶ ಪ್ರಶಸ್ತಿ’, ’ವರ್ಧಮಾನ ಪ್ರಶಸ್ತಿ’, ’ಉಗ್ರಾಣ ಪ್ರಶಸ್ತಿ’, ’ಚದುರಂಗ ಪ್ರಶಸ್ತಿ’, ’ನೃಪತುಂಗ ಪ್ರಶಸ್ತಿ’ - ಮೋದಲಾದ ಅನೇಕ ಪ್ರಶಸ್ತಿ-ಪುರಸ್ಕಾರಗಳಿಗೆ ಪಾತ್ರರಾಗಿರುವ ಇವರು ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪ್ರಶಸ್ತಿಯನ್ನೂಗಳಿಸಿದ್ದಾರ.