Quantity
Product Description
ಯಾವುದೋ ಅಜ್ಞಾತ ಕುಗ್ರಾಮವೊಂದರಲ್ಲಿ ಬಡಬ್ರಾಹ್ಮಣ ದಂಪತಿಗಳಿಗೆ ಹುಟ್ಟಿದ ಚಂದ್ರಶೇಖರನೆಂಬ ಕೂಸು 'ಆಹ್ಲಾದ'ನಾಗಿ ರೂಪುಗೊಂಡ ಕಥೆಯೇ ಬಾಬುಕೃಷ್ಣಮೂರ್ತಿಯವರ ಅಜೇಯ.
ಆಜಾದ್ ಕೆಲವರಿಗೆ ಸ್ಫೂರ್ತಿದಾಯಕ, ಹಲವರಿಗೆ ಪಥಪ್ರದರ್ಶಕ, ಇನ್ನು ಕೆಲವರಿಗೆ ಪ್ರೇರಕ. ಏಕೆಂದರೆ ಆತನ ಬದುಕು ಸಾರ್ಥಕ. ದುಷ್ಟರನ್ನು ದಮನಿಸುವ ಧೀರ ಪ್ರವೃತ್ತಿ ಆತನದು. ಸದಾ ಜಾಗೃತವಾಗಿರುವ ನೈತಿಕ ಪ್ರಜ್ಞೆ, ದೃಢವಾದ ಮನೋಬಲ ಎರಡನ್ನೂ ಮೇಲೈಸಿ ಒಮ್ಮೆಲೆ ಕಾರ್ಯರೂಪಕ್ಕಿಳಿಸುವ ಕ್ರಿಯಾಶೀಲತೆಯಿಂದ ಕೂಡಿದ ಅಸಾಮಾನ್ಯ ವ್ಯಕ್ತಿ ಆಚಾದ.
ಒಂದು ನಾಟಕದ ಜೀವಾಳ ಇರುವುದೆ ಕಥೆಯ ಓಟದಲ್ಲಿ, ಅದು ಪಡೆದುಕೊಳ್ಳುವ ಅನಿರೀಕ್ಷಿತ ತಿರುವುಗಳಲ್ಲಿ, ಹೋರಾಟದ ಸಂದರ್ಭಗಳಲ್ಲಿ, ಸಂಘರ್ಷದ ಸನ್ನಿವೇಶಗಳಲ್ಲಿ, ಗಂಡೆದೆಯ ಅಜೇಯನ ಸಾಹಸಮಯ ಬದುಕಿನಲ್ಲಿ ಇದೆಲ್ಲ ಭರಪೂರ ಇದ್ದು ನಾಟಕದ ಭಿತ್ತಿಗೆ ವೈವಿಧ್ಯವನ್ನೂ ಜೀವಂತಿಕೆಯನ್ನೂ ತುಂಬಿದೆ. ನಾಟಕವನ್ನು ಆವರಿಸಿರುವುದು ಯುವಕರ ಕೆಚ್ಚು, ಬ್ರಿಟಿಷರ ರೊಚ್ಚು.
ಅಜೇಯನ ಪತ್ವವೆ ನಾಟಕದ ಮಹತ್ವದ ಅಂಶವೂ ಹೌದು. ರಂಗಭೂಮಿಯಲ್ಲಿ ಮೈದಾಳುವ ಅಜೇಯ ಜನಮನವನ್ನು ಜಯಿಸುವುದು ನಿಶ್ಚಯ.
Author
Babu Krishnamurthy and Dr S R Leela
Binding
Soft Bound
ISBN-13
9789348731524
Number of Pages
304
Publication Year
2026
Publisher
Ayodhya Publications
Height
3 CMS
Length
22 CMS
Weight
500 GMS
Width
14 CMS
Language
Kannada