Product Description
೧೯೯೨ರಲ್ಲಿ ತಮ್ಮ ’ಬಕುಲದ ಹೂಗಳು’ ಕವನ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ಗಳಿಸಿದ ಶ್ರೀ ಸುಬ್ಬಣ್ಣ ರಂಗನಾಥ ಎಕ್ಕುಂಡಿ ಕಥನ ಕವನಗಳ ಸರದಾರರೆಂದೇ ಖ್ಯಾತರಾದ ಜನಪ್ರಿಯ ಕವಿ. ಎಕ್ಕುಂಡಿಯವರ ಕಾವ್ಯಾತ್ಮಕ, ವೈಚಾರಿಕ ಮತ್ತು ಸಾಮಾಜಿಕ ಸಂವೇದನೆಗಳಿಂದ ಪರಿಪುಷ್ಟವಾಗಿದ್ದ ಅವರ ಸಾಹಿತ್ಯ ಪ್ರತಿಭೆ ಕವಿತೆಯ ಕ್ಷೇತ್ರದ ಜೊತೆಗೆ ಕಥೆ, ವಿಮರ್ಶೆ, ಜೀವನಚರಿತ್ರೆ ಮತ್ತು ಅನುವಾದಗಳ ಕ್ಷೇತ್ರಗಳಲ್ಲೂ ಗರಿಗೆದರಿತ್ತು. ಸಮಕಾಲೀನರಾದ ಆಧುನಿಕ ಯುಗದ ಇನ್ನೊಬ್ಬ ಮಹಾಕವಿಯಾದ ಶ್ರೀ ಪುತಿನ ಅವರಿಂದ ’ಸಹಜ ಕವಿ’ ಎಂದೇ ಕೀರ್ತಿತರಾದವರು. ರಾಜ್ಯ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಮತ್ತು ಕೇಂದ್ರ ಅಕಾಡೆಮಿಯ ಪ್ರಶಸ್ತಿಗಲ ಜೋತೆಗೆ, ಸೋವಿಯೆಟ್ ಲ್ಯಾಂಡ್ ನೇಹರೂ ಪ್ರಶಸ್ತಿಯನ್ನೂ ಗಳಿಸಿದ ಹಿರಿಮೆ ಅವರದು.