Product Description
ಬ್ರಿಟಿಷರ ಆಳ್ವಿಕೆ ವಿರುದ್ಧ ಸ್ವಾತಂತ್ರ್ಯಕ್ಕಾಗಿ ನಡೆದ ಚಾರಿತ್ರಿಕ ಆಂದೋಲನದಲ್ಲಿ ಲೆಕ್ಕವಿಲ್ಲದಷ್ಟು ಜನರು ಹೋರಾಟ ನಡೆಸಿದ್ದಾರೆ. ಜಾತಿಮತಗಳ ಭೇದವಿಲ್ಲದೆ, ಪುರುಷರು-ಮಹಿಳೆಯರೆಂಬ ತಾರತಮ್ಯವಿಲ್ಲದೆ ಎಲ್ಲರೂ ಒಂದಾಗಿ ಚಳುವಳಿಗಳಲ್ಲಿ ಧುಮುಕಿದವರೇ. ಇವರಲ್ಲಿ ಬೀನಾ ದಾಸ್ ಎಂಬ ಬಂಗಾಳದ ದಿಟ್ಟ ಮಹಿಳೆಯ ಪಾತ್ರ ಹಿರಿದು. ಇವರದು ವಸಾಹತುಶಾಹಿ ಬ್ರಿಟಿಷರ ವಿರುದ್ಧ ಕ್ರಾಂತಿಕಾರಿ ಮನೋಭಾವ ಮತ್ತು ಸಶಸ್ತ್ರ ಹೋರಾಟದ ಮಾರ್ಗವಾಗಿತ್ತು. ಅಂದಿನ ಬಂಗಾಳದ ಗವರ್ನರ್ ಆಗಿದ್ದ ಸ್ಟಾನ್ಲೇ ಜಾಕ್ಸನ್ರವರ ಮೇಲೆ ಗುಂಡು ಹಾರಿಸಿದ್ದು ವಿಫಲವಾಗಿ ಪೊಲೀಸರಿಗೆ ಸೆರೆಯಾಗಿದ್ದರು. ಬ್ರಿಟಿಷ್ ಪತ್ರಿಕೆಗಳು ಇವರನ್ನು ಕುರಿತು “ಭಾರತದ ಜೋನ್ ಆಫ್ ಆರ್ಕ್” ಎಂದು ವರ್ಣಿಸಿದ್ದವು. ಕ್ರಾಂತಿಕನ್ಯೆಯೆಂದೇ ಆಕೆಯನ್ನು ಗುರುತಿಸಲಾಗಿತ್ತು. ಇವರು ಬಂಗಾಲಿಯಲ್ಲಿ ಬರೆದ್ “ಶೃಂಖಲ್ ಝಂಕಾರ್” ಎಂಬ ಆತ್ಮಕಥೆಯು ಇಂಗ್ಲಿಷಿಗೆ ಅನುವಾದವಾಗಿದ್ದು, ಇದೀಗ ಕನ್ನಡಕ್ಕೆ ಬಂದಿದೆ. ಈ ಕೃತಿಯಲ್ಲಿ ಅವರ ಹೋರಾಟದ ಸಾಹಸಮಯ ಬದುಕಿನ ಚಿತ್ರಣವಿದೆ. ಅನುಭವಿಸಿದ ಸೆರೆವಾಸದ ಬಗ್ಗೆಯೂ ವಿವರಗಳಿವೆ.