Select Size
Quantity
Product Description
ಹಂಪೆಯ ೧೫೧೦ರ ಶಾಸನದಲ್ಲಿ ಹಂಪಿಯ (ಶಾಸನಗಳು, ಪು. ೨೨) ‘ದೇವರ ಸಮ್ಮುಖದ ಮಹಾಮಂಟಪವನ್ನು ಆ ಮುಂದಣ ಗೋಪುರವನ್ನು ಕಟ್ಟಿಸಿ ಆ ಮುಂದಣ ಹಿರಿ ಗೋಪುರವನ್ನೂ ಜೀರ್ಣೋದ್ಧಾರವನ್ನೂ ಮಾಡಿಸಿದರು’ ಎಂದಿರುವುದರಿಂದಹಿಂದೆ ಇದ್ದ ಗೋಪುರವನ್ನು ಕೃಷ್ಣದೇವರಾಯ ಜೀರ್ಣೋದ್ಧಾರ ಮಾಡಿಸಿದ್ದ. ೧೫೬೫ರ ದಾಳಿಯ ನಂತರ ಧ್ವಂಸವಾದ ಗೋಪುರವನ್ನು ತೆಗೆದು ಈ ಗೋಪುರವನ್ನು ಗುರು ಬಿಷ್ಟಪ್ಪಯ್ಯ ಮತ್ತೆ ನಿರ್ಮಿಸಿದ್ದರು ಎಂದು ನನ್ನ ಅಭಿಪ್ರಾಯ. ಅವರು ಗೋಪುರ ನಿರ್ಮಾಣಕ್ಕೆ ಬಹಳ ಕಷ್ಟಪಟ್ಟರು. ಗೋಪುರದ ಎರಡನೇ ಅಂತಸ್ತಿನ ಒಳಗೆ ಅವರ ಗರ್ಭಿಣಿ ಪತ್ನಿಯ ಬಲಿಯ ಬಗ್ಗೆ ಸ್ಮಾರಕವಿದೆ ಎಂದಿದ್ದಾರೆ ಲೇಖಕಿ. ಗರ್ಭಿಣಿ ಸ್ತ್ರೀಯೊಬ್ಬಳ ಶಿಲ್ಪ ಅಲ್ಲಿದೆ. ಇಮ್ಮಡಿ ದೇವರಾಯನ ಕಾಲದಲ್ಲಿ ನಿರ್ಮಿಸಲ್ಪಟ್ಟು, ಕೃಷ್ಣ ದೇವರಾಯರಿಂದ ಜೀರ್ಣೋದ್ಧಾರಗೊಳಿಸಲ್ಪಟ್ಟ ವಿರೂಪಾಕ್ಷನ ಎದುರಿನಲ್ಲಿ ಮೊದಲಿದ್ದ ಗೋಪುರವು ಬಹುಶಃ ೧೫೬೫ರ ದಾಳಿಯಲ್ಲಿ ಧ್ವಂಸವಾಗಿತ್ತೇನೋ. ಅದನ್ನು ತೆಗೆದು ಅಲ್ಲಿಯೇ ಮತ್ತೆ ೧೭ನೆಯ ಶತಮಾನದಲ್ಲಿ ವಿಜಯನಗರದ ಗೋಪುರ ಶೈಲಿಯಲ್ಲಿಯೇ ಈ ೧೧ ಅಂತಸ್ತುಗಳ ಗೋಪುರ ನಿರ್ಮಿಸಿ ಬಿಷ್ಟಪ್ಪಯ್ಯನವರು ಸ್ಮರಣೀಯರಾಗಿದ್ದಾರೆ.
– ಸೂರ್ಯನಾಥ ಕಾಮತ್
ಇತಿಹಾಸ ತಜ್ಞರು
(ಮುನ್ನುಡಿಯಿಂದ)
Author
Vasundhara Desai
Publication Year
2023
ISBN-13
9789391852832
Binding
Soft Bound
Number of Pages
205
Publisher
Ayodhya Publications
Length
22 CMS
Weight
300 GMS
Language
Kannada