Quantity
Product Description
ಟೋಟಲ್ ಕನ್ನಡ.ಕಾಂ ಪುಸ್ತಕ ಮಳಿಗೆ ಸ್ಥಾಪಿಸುವ ಮೂಲಕ ಸಾಫ್ಟ್ ವೇರ್ ವೃತ್ತಿ ತೊರೆದು ಕನ್ನಡ ಪುಸ್ತಕ ಪ್ರಕಾಶಕರ ಸಾಲಿಗೆ ಸೇರಿದ ಲಕ್ಷ್ಮಿಕಾಂತ್ ಅವರು ಈಗ ಸಾಹಿತಿಯಾಗಿ ಹೊರ ಹೊಮ್ಮಿದ್ದಾರೆ. ಟೋಟಲ್ ಕನ್ನಡ.ಕಾಂ ಮೂಲಕ ಕನ್ನಡ ಪುಸ್ತಕ ಮಾರಾಟ, ಪ್ರಕಟಣೆ, ಕನ್ನಡ ಅಪರೂಪದ ಚಿತ್ರಗಳ ಡಿವಿಡಿ ಹೊರತರುವ ಕಾರ್ಯಗಳ ನಡುವೆ ಹನಿಗವನಗಳು ಹಾಗೂ ದೊಡ್ಡ ಕವನಗಳನ್ನೊಳಗೊಂಡ ಪುಸ್ತಕವನ್ನು ಇತ್ತೀಚೆಗೆ ಲೋಕಾರ್ಪಣೆ ಮಾಡಿದ್ದಾರೆ. C++ ಗೌರಮ್ಮ ಹೆಸರಿನ ಕೃತಿಗೆ ಸಂಗೀತ ಬ್ರಹ್ಮ ಹಂಸಲೇಖ ಬರೆದ ಮುನ್ನುಡಿ ಇಂತಿದೆ: ಬೆಂಗಳೂರಿನಲ್ಲಿ ಒಂದು ಸೈಟು ಕೊಂಡು ಸ್ವಂತ ಮನೆ ಕಟ್ಟಿಕೊಳ್ಳಲು ಕನಿಷ್ಟ 30 ವರ್ಷ ದುಡಿಯಬೇಕು, ಉಳಿಯಬೇಕು, ಉಳಿಸಬೇಕು; ಅದರಲ್ಲೂ ಸನ್ಮಾರ್ಗದಲ್ಲಿ ಗಳಿಸಬೇಕೆಂದರೆ ಬಹಳ ಹೆಣಗಬೇಕು. 30-40 ಅಥವಾ 40-60 ರ ಒಂದು ಸ್ವಂತ ಸೈಟು ಮನೆ ನಮ್ಮದೂಂತ ಹೇಳ್ಕೊಳ್ಳೋದಕ್ಕೆ ಇಷ್ಟು ಶ್ರಮ ಇರೋವಾಗ..... 1,91,791 ಚದರ ಕಿ.ಮೀ ವಿಸ್ತೀರ್ಣದ ಕರ್ನಾಟಕವೆಂಬ ಸೈಟು, ಇಲ್ಲಿನ ಜಲ ಖನಿಜ ನಿಸರ್ಗ ಸಂಪತ್ತು, ಇತಿಹಾಸ ಪರಂಪರೆ ಸಂಸ್ಕೃತಿಯ ಹಿರಿಮೆ ಗರಿಮೆಗಳೆಲ್ಲಾ ನಮ್ಮದೂ ಅಂತ ಹೇಳಿಕೊಳ್ಳುತ್ತೇವಲ್ಲ ನಾವು..... ಈ ಸ್ವಂತಿಕೆಯ ಸಾಫಲ್ಯದ ಹಿಂದಿನ ಶ್ರಮ, ತಪಸ್ಸು, ಎಷ್ಟಿರಬಹುದು..... ಕಂಪ್ಯೂಟರ್ ಇಂಜಿನಿಯರೊಬ್ಬ ಅಮೆರಿಕದಲ್ಲಿ 8 ವರ್ಷ ಇದ್ದು, ಎಲ್ಲಾ ಬಿಟ್ಟು ಬಂದು ‘ಟೋಟಲ್ ಕನ್ನಡ' ಅನ್ನೊ ಒಂದು ಮಳಿಗೆ ಮಾಡಿದ್ದಾನೇ ಅಂದ್ರೆ ‘ಕನ್ನಡದಲ್ಲಿ ಬದುಕಿದೆ' ಅಂತ ತಾನೇ ಅರ್ಥ ! ಕನ್ನಡದ ಪುಸ್ತಕಗಳನ್ನು ತಲೆಯ ಮೇಲೆ ಹೊತ್ತು ಹಳ್ಳಿ ಹಳ್ಳಿ ಸುತ್ತಿ ಕನ್ನಡವನ್ನು ಓದುವ ಹುಚ್ಚನ್ನು ಹಬ್ಬಿಸಿದವರು ಹುಯಿಲಗೊಳ ನಾರಾಯಣರಾಯರು. ಕನ್ನಡದ ಹುಚ್ಚನ್ನು ಹಬ್ಬಿಸಿದವರ ಪರಂಪರೆ ಕರ್ನಾಟಕವೆಂಬ ಏಕೀಕರಣದ ಚರಿತ್ರೆಯಲ್ಲಿ ಲಕ್ಷ ಹೆಸರುಗಳಿಗೂ ಹೆಚ್ಚಿದೆ. ‘ಟೋಟಲ್ ಕನ್ನಡ' ದ ಅಂಗಡಿ ಮಾಲಿಕನಿಗೂ ಈ ಪರಂಪರೆಯಲ್ಲಿ ಹೆಸರು ದಕ್ಕಿಸಿಕೊಳ್ಳುವ ಅದೃಷ್ಟವೊದಗಿದೆ ಎನ್ನುವುದೇ ಕನ್ನಡದ ಭಾಗ್ಯ, ಕವಿಯ ಪುಣ್ಯ. ‘ಕಾಲವಿ' ತನ್ನ ಬದುಕಿನ ಎಲ್ಲ ಘಳಿಗೆಗಳನ್ನು ಕನ್ನಡದ ಮೂಲಕವೇ ಸವಿಯಲು ಅಪೇಕ್ಷಿಸುತ್ತದೆ. ಮುಂದೆ ಓದಿ...
ಕನ್ನಡದ ಭಾಗ್ಯ, ಕವಿಯ ಪುಣ್ಯ
ತಾನು ಬರೆದ ಕವನಗಳನ್ನು ಪತ್ರಿಕೆಗಳು ಪ್ರಕಟಿಸದೇ ಹೋದಾಗ, ಚಿಂತೆ ಮಾಡದೆ, ದಿನಕ್ಕೊಂದು ಕವನದಂತೆ, ತನ್ನ ಅಂಗಡಿಯ ಮುಂದೆ ಫಲಕದಲ್ಲಿ ಬರೆದು ಬಿತ್ತರಿಸಿದ ಪುಣ್ಯಾತ್ಮ ಈ‘ಕಾಲವಿ'. ಕನ್ನಡ ಈತನನ್ನು ಕಾಪಾಡದೇ ಬಿಟ್ಟೀತೇ ! ವಸ್ತುವಲಯ ವಿಸ್ತಾರವಾಗಿದೆ. ಅದು ಈತನ ವಿಶಾಲ ಗುಣ.
ಪ್ರೀತಿಸುವಾಗ ನವ್ಯ;
ಮದುವೆಯಾದರೆ ಬಂಡಾಯ;
ಇದೇ ಬಾಳ ಸಾಹಿತ್ಯದ ಮಜಾ ಮಜಲು. ಇದು ‘ಕಾಲವಿ' ಬರೆದ ‘ಕವನದ' ಸಂಕ್ಷಿಪ್ತ ರೂಪ.
Read more at: http://kannada.oneindia.com/news/bangalore/kannada-book-by-total-kannada-lakshmikanth-hamsalekha-079257.html
Weight
200 GMS
Length
0 CMS
Height
0 CMS
Width
0 CMS
Publisher
Total Kannada
ISBN-13
9789383727001
Number of Pages
93
Author
V Lakshmikanth
UPC-EAN-CODE
9789383727001
Language
Kannada