Quantity
Product Description
ಇದು ಯಾರೋ ಹೇಳಿದ ಗೋಳಿನ ಕಥೆಯಲ್ಲ. ಇದು ಒಂದು ಹತ್ಯಾಕಾಂಡದ ಡಾರ್ಕ್ ಡೈರಿ! 2023 ರ ಅಕ್ಟೋಬರ್ ಏಳರ ಮುಂಜಾವು, ಹೊಸ ಭರವಸೆ, ಕನಸು ಕಾಣುತ್ತಿದ್ದ ಸಾವಿರಾರು ಜನರ ಮೇಲೆ -. ನರರೂಪಿ ರಾಕ್ಷಸರು ಎರಗಿ ಬಂದರು. ಎಲ್ಲೆಡೆ ಆಕ್ರಂದನ, ಮುಗಿಲು ಮುಟ್ಟಿದ ಚೀರಾಟ...ಅಗ್ನಿನರ್ತನ, ಮನೆ, ಹೊಲ, ಮೈದಾನ... ಎಲ್ಲೆಲ್ಲೂ ಹೆಣಗಳ ರಾಶಿ. ಇಂಥಾ ಕರಾಳ ಲೋಕದಲ್ಲಿ ಮಾನವೀಯತೆ' ಸತ್ತುಹೋಗಿದೆ ಎಂದು ಎಲ್ಲರೂ ಕೈ ಚೆಲ್ಲಿ ಕೂತಾಗ, ಎದೆಯಲ್ಲಿ ಬೆಂಕಿ ಇಟ್ಟುಕೊಂಡು ಎದ್ದು ನಿಂತರು ಕೆಲವು ಹುಲಿಯಂದ ಮನುಷ್ಯರು
ಊಹಿಸಿ, ಇಲ್ಲಿ ನಿಮ್ಮ ಪಕ್ಕದ ಮನೆಯವನು, ನಿಮ್ಮ ಅತ್ತೆ-ಮಾವ, ನಿಮ್ಮ ಸ್ನೇಹಿತ... ಇದ್ದಕ್ಕಿದ್ದಂತೆ ವೀರಯೋಧನಾಗಿ ಬದಲಾದರೆ? ಸಾಮಾನ್ಯರು ಅಸಾಮಾನ್ಯರಂತೆ ಕದನಕಲಿಯಾದರೆ? ನಿಜ.. ಅಂದು ಆ ಇಪ್ಪತ್ತನಾಲ್ಕು ಗಂಟೆಗಳಲ್ಲಿ ಮೂವತ್ನಾಲ್ಕು ಜೀವಗಳು ಸಾವಿನ ಕದ ಬಡಿದು, ಮರಳಿ ಬಂದು ಹೇಳಿದ ರೋಚಕ ಕಥೆಗಳಿವು..
ಇಲ್ಲಿ ಭಯಕ್ಕೆ ಹೆದರಿ ದಿಂಬಿಗೆ ಮುಖ ಒತ್ತಿ ಅತ್ತವರ ಕಥೆಯೂ ಇದೆ; ಕೈಗೆ ಸಿಕ್ಕಿದ್ದನ್ನು ಹಿಡಿದು ವೈರಿಗೆ ಎದಿರೇಟು ಕೊಟ್ಟ ಸಿಂಹಗಳ ಕಥೆಯೂ ಇದೆ. ಒಬ್ಬ ತಾಯಿ ತನ್ನ ಕಂದಮ್ಮನ ಅಳುವನ್ನು ನಿಲ್ಲಿಸಲು ಮಾಡಿದ ಉಪಾಯ, ಮಗಳಿಗಾಗಿ ಪ್ರಾಣ ಕೊಟ್ಟ ವೃದ್ಧ ತಂದೆ, ಅಸಹಾಯಕನಾಗಿ ರೋಧಿಸಿದ ಸೈನಿಕ, ಕೈಯಲ್ಲಿ ನಿಶಸ್ತ್ರನಾಗಿ ಸೆಣಸಿದ ಅಮಾಯಕ, ತಾಯಿ ತನ್ನ ಮಗುವಿನ ಅಳು ಉಗ್ರರಿಗೆ ", ಕೇಳಿಸದಿರಲೆಂದು ಬೆರಳನ್ನು ಬಾಯಲ್ಲಿಟ್ಟ ಸನ್ನಿವೇಶ, ಗಾಯಾಳುಗಳಿಗೆ ಆಶ್ರಯ ಕೊಟ್ಟ ದಾದಿಯ ಧೈರ್ಯ ಮತ್ತು ಭಯಾನಕತೆಯಲ್ಲಿಯೂ ಭರವಸೆಯನ್ನು ಬಿತ್ತಿದ ಪವಾಡ.... ಈ ಕಥೆಗಳೆಲ್ಲ ನಿಮ್ಮ ಎದೆಯಲ್ಲಿ ಒಂದು ಬಿಸಿ ರಕ್ತದ ಉಂಡೆಗಳನ್ನು ಇಡುತ್ತಾ ಹೋಗುತ್ತವೆ. ಒಬ್ಬ ಡ್ರೈವರ್ ತನ್ನ ಗಾಡಿಯಲ್ಲಿ ಮೂವತ್ತು ಜೀವಗಳನ್ನು ತುಂಬಿಕೊಂಡು, ಗುಂಡುಗಳ ಮಳೆ ನಡುವೆ ರಾತ್ರಿಯೆಲ್ಲ ಓಡುತ್ತಾನೆ, ಒಬ್ಬ. ವೃದ್ಧೆ ತನ್ನ ಮನೆಯ ನೆಲಮಾಳಿಗೆಯನ್ನು ತಾತ್ಕಾಲಿಕ ಆಸ್ಪತ್ರೆಯಾಗಿ ಬದಲಾಯಿಸುತ್ತಾಳೆ, ಒಬ್ಬ ! ಯುವಕ, ಶತ್ರುಗಳ ಕಣ್ಣೆದುರೇ ಗ್ರೆನೇಡ್ಗಳನ್ನು ವಾಪಸ್ ಎಸೆಯುತ್ತಾನೆ. ಅಲ್ಲಿ ಜಾತಿ ಇಲ್ಲ, ಧರ್ಮ ಇಲ್ಲ, ಇದ್ದಿದ್ದು ಬರೀ ಜೀವ ಉಳಿಸಿಕೊಳ್ಳುವ ಉಸಿರ ಹಪಾಹಪಿ!
ಪಾಪಿಗಳ ಲೋಕದಲ್ಲಿ ಒಳ್ಳೆಯವರು ಉಳಿದುಕೊಳ್ಳುವುದು ಸುಲಭವಲ್ಲ. ಆದರೂ, ಇವರು - -ಬದುಕುಳಿದರು. ಕೆಲವರು ಶಾಶ್ವತವಾಗಿ ಕಣ್ಮುಚ್ಚಿದರು. ಆದರೆ ಬದುಕಿದ್ದ ಪ್ರತಿಯೊಬ್ಬರಿಗೂ ಜೀವದ.. ಬೆಲೆಯನ್ನು ಹೇಳಿ ಹೋದರು.
ಇದು ಮರೆಯಲಾಗದ ವೀರರ, ಊಹಿಸಲಾಗದ ಕಥೆಗಳು. ಇದು ಕೇವಲ ನೋವಿನ ಕಥೆಗಳಲ್ಲ, ಪ್ರತಿ ಕಠಿಣ ಸವಾಲನ್ನು ಎದುರಿಸಿ ನಿಂತ ಮಾನವ ಚೇತನದ ಸ್ಪೂರ್ತಿಯ ಸೆಲೆ. ಈ ಕಥೆಗಳನ್ನು ನಾನು ಬರೀ ಅನುವಾದಿಸಿಲ್ಲ, ಈ ಕಥೆಗಳು ಹುಟ್ಟಿದ ಜಾಗಕ್ಕೆ ಖುದ್ದಾಗಿ ಹೋಗಿ, ಅಲ್ಲಿನ ನೆತ್ತರ ನೆಲದ ಬಿಸಿಯನ್ನು ಅನುಭವಿಸಿ ಬಂದು ಬರೆದಿದ್ದೇನೆ. ಈ ಅನುವಾದದ ಪ್ರಕ್ರಿಯೆ ನನ್ನನ್ನೂ ಕಥೆಯ ಒಂದು ಭಾಗವಾಗಿಸಿದೆ.
Binding
Soft Bound
Author
Vishweshwar Bhat
ISBN-13
9788197984747
Number of Pages
442
Publisher
Vishwavani Pusthaka
Publication Year
2025
Height
4 CMS
Length
22 CMS
Weight
500 GMS
Width
14 CMS
Language
Kannada