Quantity
Product Description
ವೃತ್ತಿಯಲ್ಲಿ ಪ್ರಸಿದ್ಧ ವೈದ್ಯ ಹಾಗೂ ಸರ್ಜನ್ ಆಗಿರುವ ಡಾ. ಸಂಜಯ್ ಎಚ್.ಆರ್ ಅವರ ಪ್ರಥಮ ಕೃತಿ ಈ ಪುಸ್ತಕ, ಲೇಖಕರು ಪರಿಸರದೊಂದಿಗಿನ ತಮ್ಮ ಒಡನಾಟದ ಅನುಭವವನ್ನು ಬಹಳ ಚೇತೋಹಾರಿ ಶೈಲಿಯಲ್ಲಿ ಬರೆದಿದ್ದಾರೆ. ಪರಿಸರದ ಕತೆಗಳನ್ನು ಕುತೂಹಲಕಾರಿಯೂ, ಮಾಹಿತಿಪೂರ್ಣವೂ ಆಗಿ ಚಿತ್ರಿಸುವವರ ಸಂಖ್ಯೆ ತುಂಬ ವಿರಳವಾದ ಇಂದಿನ ದಿನಗಳಲ್ಲಿ ಡಾ. ಸಂಜಯ್ ಅವರ ಕತೆಗಳು ಮರುಭೂಮಿಯಲ್ಲಿನ ಓಯಸಿಸ್ ನಂತೆಯೇ ಓದುಗರ ಮನವನ್ನು ತಣಿಸುತ್ತವೆ. ಈ ವಿಶಿಷ್ಟ ಸಾಹಿತ್ಯ ಪೂರ್ಣಚಂದ್ರ ತೇಜಸ್ವಿಯವರ ಬರಹ, ಕಥನಗಳನ್ನು ಇಷ್ಟಪಡುವವರಿಗೆ ತುಂಬ ಆಪ್ತವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.
ಬಹುಮುಖ ಪ್ರತಿಭೆಯ ಡಾ. ಸಂಜಯ್ ಅವರ ಬರಹಗಳು ಪರಿಸರದ ಬಗೆಗಿನ ಅವರ ಸೂಕ್ಷ್ಮ, ಸಂವೇದನಾಶೀಲ ಒಳನೋಟವನ್ನೂ ಪ್ರೀತಿ, ಕಾಳಜಿಯನ್ನೂ ಅನನ್ಯವಾಗಿ ಅಭಿವ್ಯಕ್ತಿಸಿವೆ. ಯಾವುದೇ ವಿಷಯವನ್ನೂ ತಲಸ್ಪರ್ಶಿಯಾಗಿ, ಮನೋಜ್ಞವಾಗಿ ಚಿತ್ರಿಸುವ ಕಲೆ ಇವರಿಗೆ ಸಿದ್ದಿಸಿದೆ. ಗಹನವಾದ ವಿಚಾರಗಳನ್ನೂ ಅತ್ಯಂತ ಸರಳವಾಗಿ ನವಿರುಹಾಸ್ಯದ ಮೂಲಕ ಮನದಟ್ಟುಮಾಡಿಕೊಡುವ ಇವರ ಕೌಶಲವಂತೂ ನಮ್ಮನ್ನು ಮಂತ್ರಮುಗ್ಧಗೊಳಿಸುವಂಥದ್ದು. ಈಗಾಗಲೇ ದೇಶ-ವಿದೇಶಗಳಲ್ಲಿ ಅಪಾರ ಓದುಗರ ಮೆಚ್ಚುಗೆ ಗಳಿಸಿರುವ ಇವರ ಸಾಹಿತ್ಯ ಇದೀಗ ಪುಸ್ತಕವಾಗಿ ಹೊರಬರುತ್ತಿರುವುದು ಸಂತಸದ ವಿಚಾರ. ಹೀಗೆ ನಿರಂತರವಾಗಿ ಸೃಜನಶೀಲ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಡಾ. ಸಂಜಯ್ ಅವರನ್ನು ತುಂಬು ಹೃದಯದಿಂದ ಅಭಿನಂದಿಸುತ್ತೇವೆ.
ಡಾ. ಸಂಜಯ್ ಅವರ ವೈದ್ಯಕೀಯ ಸೇವೆ ಸಮಾಜಕ್ಕೆ ಎಷ್ಟು ಅಗತ್ಯವೋ, ಹಾಗೆಯೇ ಕನ್ನಡ ಸಾಹಿತ್ಯಕ್ಕೂ ಅವರ ಮತ್ತಷ್ಟು ಸೇವೆಯ ತುರ್ತು ಅಗತ್ಯವಿದೆ!
Author
H R Sanjay
Binding
Soft Bound
Number of Pages
132
Publication Year
2024
Publisher
Harivu Books
Height
2 CMS
Length
22 CMS
Weight
200 GMS
Width
14 CMS
Language
Kannada