Product Description
ನಾವು ಈಗ ಪ್ರಜಾಪ್ರಭುತ್ವದ ಕಾಲದಲ್ಲಿದ್ದೇವೆ. ಅರಸೊತ್ತಿಗೆಯನ್ನು ಹೋಗಲಾಡಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸ್ಥಾಪಿಸಿಕೊಂಡಿದ್ದೇವೆ.
ಛತ್ರಪತಿ ಶಿವಾಜಿಯದು ಸಾಮಂತರ ಕಾಲವಾಗಿತ್ತು. ಶಿವಾಜಿ ಸಹ ಒಬ್ಬ ಸಾಮಂತ ರಾಜನೇ. ನಮ್ಮ ರಾಜರು ಬ್ರಿಟಿಷ್ ಸಾಮ್ರಾಜ್ಯಶಾಹಿಯ ವಿರುದ್ಧ ಆಗಾಗ ಹೋರಾಟ ನಡೆಸಿದರಾದರೂ, ಅದನ್ನು ಸಂಪೂರ್ಣ ಹಿಮ್ಮೆಟ್ಟಿಸಲು ಅವರಿಗೆ ಸಾಧ್ಯವಾಗಲಿಲ್ಲ. ಅಸಂಖ್ಯಾತ ರಾಜರು ಈ ದೇಶವನ್ನು ಆಳಿ ಹೋಗಿದ್ದಾರೆ. ಆದರೆ ಶಿವಾಜಿ ಜಯಂತಿಯನ್ನು, ಶಿವಾಜಿ ಪುಣ್ಯತಿಥಿಯನ್ನು ಆಚರಿಸುತ್ತ, ಆತನ ಶೌರ್ಯ, ಪರಾಕ್ರಮಗಳನ್ನು ಸ್ಮರಿಸುವಂತೆ ಬೇರೆ ರಾಜರನ್ನು ಸ್ಮರಿಸುತ್ತಿಲ್ಲ. ಇದಕ್ಕೇನು ಕಾರಣವಿರಬಹುದು? ಕೆಲವು ರಾಜರನ್ನು ಕೆಲವು ಪ್ರದೇಶಗಳಲ್ಲಿ ಸ್ಮರಿಸಿಕೊಳ್ಳುತ್ತಿರಬಹುದು. ಶಿವಾಜಿಯ ಸ್ಮರಣೆಯನ್ನು ವಿಶಾಲ ಪ್ರದೇಶದಲ್ಲಿ ವಿಜೃಂಭಣೆ, ಉತ್ಸಾಹ, ಉಲ್ಲಾಸಗಳಿಂದ ಆಚರಿಸುತ್ತಿರುವುದಕ್ಕೆ ಏನು ಕಾರಣವಿರಬಹುದು? ಈ ಉತ್ಸಾಹದ ಆಚರಣೆಗಳಲ್ಲಿ ಶಿವಾಜಿಯ ನಿಜವಾದ ಧ್ಯೇಯೋದ್ದೇಶಗಳು, ಆಶಯಗಳು ಸ್ವಲ್ಪಮಟ್ಟಿಗಾದರೂ ವ್ಯಕ್ತವಾಗುತ್ತವೆಯೆ? ಶಿವಾಜಿಯ ವ್ಯಕ್ತಿತ್ವದ ಮೇಲೆ ಬೆಳಕು ಚೆಲ್ಲುವಂತಿರುವ ಈ ಕೃತಿಯನ್ನು ಹಲವು, ಸಾಕ್ಷ್ಯಾಧಾರಗಳ ಆಧಾರದ ಮೇಲೆ ರಚಿಸಲಾಗಿದೆ.