Quantity
Product Description
ಮೂವತ್ತು ವರ್ಷಗಳ ಕೆಳಗೆ ಲಂಕೇಶ್ ಪತ್ರಿಕೆಯಲ್ಲಿ ಬಿ. ಚಂದ್ರೇಗೌಡರ 'ಮೂಡ್ಲಳ್ಳಿತ ' ಟಾಪಿದ್ದತೆ?' ಎಂಬ ಪುಟ್ಟ ಬರಹ ಪ್ರಕಟವಾಯಿತು. ಆ ಬರಹದಲ್ಲಿದ್ದ ಹಳ್ಳಿ ಮಾತಿನ ಖದರ್ ಕಂಡು ವಿಸ್ಮಯಗೊಂಡವರಲ್ಲಿ ನಾನೂ ಒಬ್ಬ. ಅವತ್ತು ಸಂಜೆ ಸಂಪಾದಕರಾದ ಲಂಕೇಶರೊಡನೆ ಈ ಬರಹ ಹುಟ್ಟಿಸಿದ ಮುಗ್ಧ ನಗೆ ಕುರಿತು ಮಾತಾಡುತ್ತಿದ್ದೆ. ಮುಗುಳ್ನಕ್ಕ ಸಂಪಾದಕರು ಅಷ್ಟರಲ್ಲಾಗಲೇ ಚಂದ್ರೇಗೌಡರಿಗೆ ಅಂಕಣ ಬರೆಯಲು ಹೇಳಿದಂತಿತ್ತು!
ಅವತ್ತು ಶುರುವಾದ ಚಂದ್ರೇಗೌಡರ 'ಕಟ್ಟೆ ಪುರಾಣ' ಲಂಕೇಶರು ತೀರಿಕೊಳ್ಳುವವರೆಗೂ ಮುಂದುವರಿಯಿತು. ಸಂಪಾದಕರು ಅನೇಕರ ಅಂಕಣಗಳನ್ನು ನಿಲ್ಲಿಸಿದರೂ ಪುರಾಣಕ್ಕೆ ಮಾತ್ರ ಬ್ರೇಕ್ ಹಾಕಲಿಲ್ಲ. ಲಂಕೇಶರ ನಂತರವೂ ಮುಂದುವರಿದ 'ಕಟ್ಟೆ ಪುರಾಣ'ದ ಬರವಣಿಗೆ ನಿಂತರೂ ಅಂಕಣಕಾರರ ಮಾತುಕತೆಯಲ್ಲಿ ಹರಿಯುತ್ತಲೇ ಇದೆ!
ರಾಜಕೀಯ ವಿಮರ್ಶೆ, ಸಮಾಜ ವಿಮರ್ಶೆ ಎರಡೂ ಆಗಿದ್ದ 'ಕಟ್ಟೆ ಪುರಾಣ' ಥರದ ಸಹಜ ಗ್ರಾಮೀಣ ಹಾಸ್ಯ ಕನ್ನಡದಲ್ಲಿ ಇದ್ದಂತಿಲ್ಲ. ಗ್ರಾಮಭಾಷೆಯ ಲಯಗಳನ್ನು ವೈನೋದಿಕ ಲೇಖಕರಲ್ಲೂ ನಾನು ಕಂಡಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ. ಇದು ನಿರುದ್ದಿಶ್ಯ ಹರಟೆಯಲ್ಲ. ಗಾಂಧಿ, ಅಂಬೇಡ್ಕರ್, ಲೋಹಿಯಾ: ಲಂಕೇಶರ ಚಿಂತನೆಗಳನ್ನು ಸಿಕ್ಕಷ್ಟು ಹೀರಿಕೊಂಡು ಹುಟ್ಟಿದ ವಿಮರ್ಶೆ ಇದು. ಗ್ರಾಮೀಣ ಪಾತ್ರಗಳಿಂದ ಚಿಮ್ಮಿದ ಮುಕ್ತ ವೈನೋದಿಕ ವಿಮರ್ಶೆಯ ಅಂಕಣವೊಂದು ಜವಾಬ್ದಾರಿಯುತ, ಆರೋಗ್ಯಕರ ರಾಜಕೀಯ ವಿಮರ್ಶೆಯ ವೇದಿಕೆಯಾದ ಅಚ್ಚರಿ ಇದು.
ಚಂದ್ರೇಗೌಡರ 'ಕಟ್ಟೆಪುರಾಣ'ವನ್ನು ಅನುಕರಿಸಿ ಹುಟ್ಟಿದ ಟೆಲಿಹಾಸ್ಯಸರಣಿಗಳು. ಸಿನಿಮಾ ಸಂಭಾಷಣೆಗಳು ನೂರಾರು! ಆದರೆ ತಮ್ಮ ಬರವಣಿಗೆಯ ಬಗ್ಗೆ ಯಾವ ಭ್ರಮೆಗಳೂ ಇಲ್ಲದವರಂತೆ ಅಡ್ಡಾಡುವ ಚಂದ್ರೇಗೌಡರು ಆಡಾಡುತ್ತಲೇ ಬರವಣಿಗೆಯ ಹೊಸ ಹಾದಿ ತೆರೆದ ಈ ಕ್ರಮ ಅನನ್ಯವಾಗಿದೆ.
Author
K Satyanarayana
Binding
Soft Bound
ISBN-13
9788198226334
Number of Pages
192
Publication Year
2024
Publisher
Amulya Pustaka
Height
1 CMS
Length
22 CMS
Weight
200 GMS
Width
14 CMS
Language
Kannada