Quantity
Product Description
ಕತೆಗಳಲ್ಲಿ ಇಷ್ಟದ ಅಥವಾ ಓದುಗರಿಗೆ ಇಷ್ಟವಾಗುವ ಒಂದು ಕತೆಯ ಹೆಸರನ್ನು ಪುಸ್ತಕದ ಹೆಸರಾಗಿ ಇಡುವುದು ವಾಡಿಕೆ. ಆದರೆ, ಈ ಕತಾಸಂಕಲನದಲ್ಲಿ ಇರುವ ಐದೂ ಕತೆಗಳಲ್ಲಿ ಯಾವುದಕ್ಕೂ "ಅವಳ ಹೆಜ್ಜೆ ಗುರುತು" ಎಂಬ ಹೆಸರಿಲ್ಲ ಮತ್ತೆ ಯಾಕೆ ಈ ಹೆಸರು ಎಂದು ಕೇಳಿದರೆ ಈ ಪುಸ್ತಕದ ಐದೂ ಕತೆಗಳಲ್ಲಿ ಬರುವ ಹಲವಾರು ಪಾತ್ರಗಳು ಒಂದಲ್ಲಾ ಒಂದು ರೀತಿಯಲ್ಲಿ ನನ್ನ ಹಾಗೂ ನಿಮ್ಮ ಜೀವನದಲ್ಲಿ ಗುರುತಾಗಿ ಉಳಿವವರು. ಪುಸ್ತಕ ಓದುವಾಗ ಇಲ್ಲಿನ ಕೆಲವು ಪಾತ್ರಗಳು ಅಮ್ಮನನ್ನು ಹೋಲಿದರೆ ಮತ್ತೆ ಕೆಲವು ಸ್ನೇಹಿತೆಯನ್ನೋ, ಹೆಂಡತಿಯನ್ನೋ, ಸಹೋದರಿಯನ್ನೋ, ಅಕ್ಕಪಕ್ಕದ ಮನೆಯವರನ್ನೋ ಅಥವಾ ಬಸ್ಸು ರೈಲಿನಲ್ಲಿ ಹೋಗುವಾಗ ಎದುರು ಕುಳಿತವರನ್ನೋ ಹೋಲುತ್ತದೆ. ಈ ಕತೆಯಲ್ಲಿ ಬರುವ ಎಲ್ಲರೂ ಬದುಕಿನ ಪುಟದಲ್ಲಿ ಕೇವಲ ಸಣ್ಣದೊಂದು ಪಾತ್ರ ಮಾತ್ರವಾಗದೇ ಬದುಕನ್ನು ಕಲಿಸಿಕೊಟ್ಟವರಾಗುತ್ತಾರೆ. ಹಾಗಾಗೇ ಈ ಪುಸ್ತಕದ ಹೆಸರು “ಅವಳ ಹೆಜ್ಜೆ ಗುರುತು”!
Author
Sowmya Kashi
Binding
Soft Bound
Number of Pages
112
Publication Year
2025
Publisher
Harivu Books
Height
2 CMS
Weight
200 GMS
Width
14 CMS
Language
Kannada