Product Description
ಎ.ಜಿ.ನೂರಾನಿಯವರ ‘ಬಿಜೆಪಿ ಮತ್ತು ಆರೆಸ್ಸೆಸ್’ ಹೊಸತಲೆಮಾರಿನವರಲ್ಲಿ ಅಸತ್ಯಗಳನ್ನು, ಅರ್ಧ ಸತ್ಯಗಲನ್ನು ಪ್ರಚಾರಮಾಡುತ್ತಿರುವ, ಸಂಸ್ಕೃತಿಯ ಹೆಸರಿನಲ್ಲಿ ಜನವಿರೋಧಿ ಮೌಲ್ಯಗಳನ್ನು ಬಿತ್ತುತ್ತಾ ಸಮಾಜವನ್ನು ಮತೀಯವಾಗಿ ಧ್ರುವೀಕರಿಸುತ್ತಿರುವ ಸಂಘ ಪರಿವಾರದ ನಿಜರೂಪವನ್ನು ದರ್ಶಿಸುವ ಪ್ರಯತ್ನವನ್ನು ಮಾಡುತ್ತದೆ. ಹಿಂದೂತ್ವವಾದಿ ಆರೆಸ್ಸೆಸ್ ಭಾರತದ ಪ್ರಜಾತಾಂತ್ರಿಕ ವ್ಯವಸ್ಥೆಗೆ ಮತ್ತು ಜಾತ್ಯತೀತತೆಯಂತಹ ಸಾಂವಿಧಾನಿಕ ಮೌಲ್ಯಗಳಿಗೆ ಹೇಗೆ ಬಹುದೊಡ್ಡ ಗಂಡಾಂತರವಾಗಿದೆ ಎಂಬುದನ್ನು ಲೇಖಕರು ತನ್ನದೇ ಆದ ಶೈಲಿಯಲ್ಲಿ ವಿವರಿಸುತ್ತಾರೆ. ಆರೆಸ್ಸೆಸ್ನ ಫ್ಯಾಸಿಸ್ಟ್ ಮುಖವನ್ನು, ಅದರ ಆಷಾಢಭೂತಿತನವನ್ನು ಸೋದಾಹರಣವಾಗಿ ಬೆತ್ತಲುಗೊಳಿಸುತ್ತಾರೆ. ಸಂಘ ಪರಿವಾರ ಕುರಿತಂತೆ ಜನಮಾನಸದಲ್ಲಿ ಆಳವಾಗಿ ಬೇರೂರಿರುವ ಕೆಲವು ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವುದರೊಂದಿಗೆ ಜನಸಾಮಾನ್ಯರನ್ನು ಕಾಡುತ್ತಿರುವ ಅನೇಕ ಪ್ರಶ್ನೆಗಳಿಗೆ ಪುರಾವೆಸಹಿತ ಉತ್ತರಗಳನ್ನು ಒದಗಿಸುವ ಪ್ರಯತ್ನವನ್ನೂ ಮಾಡುತ್ತಾರೆ.