Select Size
Quantity
Product Description
Aede | G Praveen Kumar
ತಪ್ಪುತ್ತಿರುವ ಉಸಿರನ್ನು ನಿಯಂತ್ರಿಸಿಕೊಳ್ಳುತ್ತಾ “ಯಾರ್ದಣ್ಣಾ ಟೆಲಿಗ್ರಾಮು?” ಅಂದಳು. ಅದಕ್ಕೆ ಪೋಸ್ಟ್ಮ್ಯಾನ್ ರಂಗಣ್ಣ “ನಿಮ್ಮೂರಿಂದವ್ವಾ” ಎಂದಾಗ ರೇಣುಕಾಳ ಮೈ ಅಲ್ಲಾಡಿದಂತಾಗಿ ಗಂಟಲು ಕಟ್ಟಿಕೊಂಡಿತು.
ಬಸಜ್ಜ ಮಾಡುವ ಮಣ್ಣಿನ ಕಾರ್ಯ ನೋಡಿದವರಿಗೆ “ಸತ್ತ್ ಮ್ಯಾಲೆ ಹಿಂಗ್ ನೋಡಿಕೊಂಡ್ರೆ, ಸಾಯಾಕ್ ಯಾಕ ಹೆದುರ್ಬೇಕು?” ಎನ್ನಿಸುತ್ತಿತ್ತು. ಇದೇ ಹೆಮ್ಮೆಯಿಂದ ಕೆಲವರು ಅವನನ್ನು “ನಮ್ ಕಾಲುದ್ ಸತ್ಯ್ ಹರಿಶ್ಚಂದ್ರ” ಎನ್ನುತ್ತಿದ್ದರು.
ಆಯಣ್ಣ ಜೇಬಿನಿಂದ ಹತ್ತತ್ತು ರೂಪಾಯಿಯ ಎರಡು ಡೈರಿ ಮಿಲ್ಕ್ ಚಾಕ್ಲೇಟ್ಗಳನ್ನು ತೆಗೆದು ನನ್ನ ಕೈಯೊಳಗಿಟ್ಟು ಮುಖ ನೋಡಿದ. ಆಯಣ್ಣ ಚಾಕ್ಲೇಟ್ಗಳನ್ನು ಕೊಟ್ಟಿರದೇ ಇದ್ದಿದ್ದರೆ, ಏನು ಹೇಳುತ್ತಿದ್ದೆನೋ? ಗೊತ್ತಿಲ್ಲ.
"ಹುಡುಗಿ ಹೆಂಗಾನಾ ಇರ್ಲೆಜಾ, ರೊಟ್ಟೀನ ರೌಂಡುಗ ಮಾಡಾಕ ಬರ್ಬೇಕು. ಜೊತೀಗೆ ಬೆಂಡೀಕಾಯಿ ಚಟ್ನಿಗೂಡ ಬರ್ಬೇಕು. ಅಜಾ, ಹಂಗೇ ಅಜ್ಜಿಯಂಗ ಸಂಸಾರಾನೂ ಮಾಡ್ಬೇಕು" ಎಂದ ವಿಜಯ್.
ಊರೆಂದರೆ ಬರೀ ನೆಲವಲ್ಲ, ಊರೆಂದರೆ ಮಂದಿ ಕೂಡ ಎಂಬುದು ಹನುಮಜ್ಜನಿಗೆ ಅರ್ಥವಾಗಿ ಕೆಂಪು ಬಸ್ಸು ಹತ್ತಿ ಬೆಂಗಳೂರನ್ನು ಸೇರಿಕೊಂಡ.
Author
G Praveen Kumar
Binding
Soft Bound
Number of Pages
121
Publication Year
2024
Publisher
Olavu Bareha
Height
1 CMS
Length
22 CMS
Weight
100 GMS
Width
14 CMS
Language
Kannada