Product Description
ನೆಲ್ಸನ್ ಮಂಡೇಲಾ ತಮ್ಮ ಜೀವಮಾನದಲ್ಲಿಯೇ ದಂತಕಥೆಯಾದರು. ನೊಬೆಲ್ ಶಾಂತಿ ಪ್ರಶಸ್ತಿ ಅವರನ್ನು ಅರಸಿಕೊಂಡು ಬಂದಿತು. ನಾವು ಅವರಿಗೆ ‘ಭಾರತರತ್ನ’ ನೀಡಿದೆವು. ಆಫ್ರಿಕಾದ ಜನತೆ ಮಂಡೇಲಾರನ್ನು ‘ರಾಷ್ಟ್ರ ಪಿತಾಮಹ’ ಎಂದು ಕರೆದರು. ‘ಪ್ರಜಾಪ್ರಭುತ್ವ ಸಂಸ್ಥಾಪಕ’,‘ರಾಷ್ಟ್ರ ವಿಮೋಚಕ’, ‘ಮಹಾನ್ ಸಂರಕ್ಷಕ’, ‘ಧರ್ಮನಿರಪೇಕ್ಷ ಸಂತ’,‘ವಾಷಿಂಗ್ಟನ್ ಮತ್ತು ಲಿಂಕನ್ ಅವರ ಸಂಯುಕ್ತ ರೂಪ’ ಹೀಗೆಲ್ಲ ಪ್ರಸಿದ್ಧರಾದರು. ನೆಲ್ಸನ್ ಮಂಡೇಲಾ ಅವರ ಅಧಿಕಾರದ ಅವಧಿಯನ್ನು ‘ಭರವಸೆ ಹಾಗೂ ಸೌಹಾರ್ದತೆಯ ಸುವರ್ಣ ಯುಗ’ ಎಂದು ಕರೆದರು. ಮಂಡೇಲಾರವರಿಗೆ 250ಕ್ಕೂ ಹೆಚ್ಚು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರಶಸ್ತಿಗಳು ದೊರೆತವು ಎಂದರೆ ಅವರು ನಮ್ಮ ಕಾಲದ ಮಹಾನ್ ನಾಯಕ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಮಂಡೇಲಾ ಮಹಾತ್ಮ ಗಾಂಧಿಯವರಿಂದ ಪ್ರಭಾವಿತರಾಗಿದ್ದರು.