Product Description
ನೀವು ಫೇಸ್ಬುಕ್, ವಾಟ್ಸಪ್ಪಲ್ಲಿ ಹ್ಯಾಪ್ಪಿಯಾಗಿದ್ದು ಪುಸ್ತಕ ಓದುವುದರಲ್ಲಿ ನಿಮಗೆ ನಂಬಿಕೆ ಇಲ್ಲ ಅನ್ನುವುದಾದರೆ ಈ ಪುಸ್ತಕವನ್ನು ಬಿಟ್ಟುಬಿಡಿ. ನಿಮಗಿದರಿಂದ ಲಾಭವಿಲ್ಲ. ಪರೀಕ್ಷೆಯಲ್ಲಿ ಫೇಲಾದಾಗ, ಕೆಲಸ ಕಳೆದುಕೊಂಡಾಗ, ಪ್ರೀತಿಯಲ್ಲಿ ಸೋತಾಗ, ಹತ್ತಿರದವರು ದೂರಾದಾಗ, ಬಿಸಿನೆಸ್ಸಲ್ಲಿ ಲಾಸಾದಾಗ, ಯಾರೂ ಇಲ್ಲ ಅನ್ನಿಸಿ ಬೇಸರವಾದಾಗ, ದುಃಖ ತಾಲಲಾಗದೆ ಅಳುವಂತಾದಾಗ, ಇನ್ನೇನೂ ಇಲ್ಲ ಎಲ್ಲಾ ಖಾಲಿ ಖಾಲಿ ಅಂತನ್ನಿಸಿ ಯಾರಾದರೂ ಬಂದು ಸಮಾಧಾನ ಹೇಳಲಿ ಅಂತ ವಿಷಣ್ಣವದನರಾಗಿ ಕೂತಿರುತ್ತಾರಲ್ಲ, ಅಂಥಾ ಜೀವಗಳು ಯಾರಾದರೂ ಸಿಕ್ಕರೆ ಅವರ ಕೈಯಲ್ಲಿ ಈ ಪುಸ್ತಕವನ್ನಿಡಿ.
ಇಲ್ಲಿರುವ ಅಷ್ಟೂ ಕತೆಗಳು ನಮಗಿಂತ ದೊಡ್ಡದು ಏನೋ ಇದೆ ಈ ಜಗತ್ತಲ್ಲಿ ಅಂತ ಹೇಳಿ ಸಾಂತ್ವನಗೊಳಿಸೋ ಜಾದೂಗಳು. ಸಮಸ್ಯೆಗಳನ್ನು, ನೋವುಗಳನ್ನು ದಾಟಿಹೋಗುವಂತೆ ಪ್ರೇರೇಪಿಸುವ, ಏನಾದರೊಮ್ದು ಮಾಡಬೇಕು ಅಂತ ಯೋಚನೆ ಮಾಡುತ್ತಲೇ ಇರುವವರನ್ನು ಎದ್ದು ನಿಲ್ಲಿಸಿ ಮುಂದೆ ದೂಡುವ ಅದ್ಭುತ ಅಡ್ವೆಂಚರ್ ಕತೆಗಳು.