Select Size
Quantity
Product Description
ಸುಧಾ ಆಡುಕಳ ಅವರ ಕತೆ, ಕವನ, ನಾಟಕ ಹಾಗು ಪತ್ರಗಳನ್ನು ಓದುತ್ತಲೇ ಬೆಳೆದ ನನಗೆ ಈ ಕಥಾ ಸಂಕಲನ ಅವರ ಬರಹ ಮತ್ತು ಬದುಕಿನ ಅನನ್ಯತೆಯ ಉತ್ತಮ ನಿದರ್ಶನ ಅಂತೆನಿಸಿದೆ. ಇಲ್ಲಿ ವಿಜ್ಞಾನ ಶಿಕ್ಷಕಿಯಾಗಿ ವೈಜ್ಞಾನಿಕ ಮನೋಧರ್ಮದ ಕುರಿತಾದ ಅವರ ಬದ್ಧತೆ ಮತ್ತು ಬದುಕನ್ನು ರೂಪಕಗಳ ಮೂಲಕ ಹುಡುಕಹೊರಟಿರುವ ಕವಿಯ ಆದರ್ಶ ಬೇರೆಬೇರೆಯಾಗುವುದೇ ಇಲ್ಲ. ಇವೆರಡನ್ನೂ ಪಾಕಮಾಡುತ್ತ ಥಟ್ಟನೆ ಓದುಗರನ್ನು ಹೊಸ ದರ್ಶನಕ್ಕೆ ಒಡ್ಡುವ ಅವರ ನಾಟಕೀಯ ಸಮಯದ ಜಾಣ್ಮೆ ನನಗೆ ಅತಿ ಪ್ರಿಯವಾದದ್ದು. ಅವರ ಸಾಮಾಜಿಕ ಪ್ರಜ್ಜೆ ಮತ್ತು ಕಳಕಳಿ ಅವರನ್ನು ಅನೇಕ ಸೂಕ್ಷ್ಮ ಮತ್ತು ಹೆಚ್ಚಾಗಿ ಕನ್ನಡ ಸಾಹಿತ್ಯ ಪ್ರಜ್ಞೆಯ ಆಚೆಗೇ ಉಳಿದ ಸ್ತ್ರೀ ತಲ್ಲಣಗಳ ಅನ್ವೇಷಣೆಗೆ ಹಚ್ಚುತ್ತವೆ. ಕೆಳ-ಮಧ್ಯಮ ವರ್ಗದ ಹೆಣ್ಣಿನ ಸುತ್ತ ಹೆಣದಿರುವ 'ಒಂದು ಶೌಚಾಲಯದ ಕಥೆ' ಇದಕ್ಕೆ ಉದಾಹರಣಿ, ಈ ಕಥಾ ಸಂಕಲನದಲ್ಲಿ ಯಾವುದೂ ಕೇವಲ ಪ್ರೇಮ ಕಥನಗಳಲ್ಲದಿದ್ದರೂ, ಅವರ ಕವಿತೆಗಳಲ್ಲಿ ಕಂಡುಬರುವ ಪ್ರೀತಿಯ ಕುರಿತಾದ ಅವರ ಅಗಾಧ ಅಚ್ಚರಿ ಇಲ್ಲ ಹಲವು ಸಾಮಾಜಿಕ ಮತ್ತು ರಾಜಕೀಯ ಗೊಂದಲಗಳಿಗೆ ಸೃಜನಶೀಲ ಉತ್ತರಗಳನ್ನು ಹುಡುಕುವ ಮಾರ್ಗವೂ ಆಗಿದೆ.
ISBN-13
9789394942981
Binding
Soft Bound
Publisher
Veeraloka Books Pvt Ltd
Author
Sudha Adukala
Publication Year
2023
Number of Pages
156
Length
22 CMS
Weight
200 GMS
Height
2 CMS
Width
14 CMS
Language
Kannada