Quantity
Product Description
ಕನ್ನಡದ ವಿಶಿಷ್ಟ ನಾಟಕಕಾರ ಕೈಲಾಸಂರವರನ್ನು ಕುರಿತ ಸ್ವಾರಸ್ಯಪೂರ್ಣ ಕೃತಿ ಇದು. ಈ ಪುಸ್ತಕವನ್ನು ಕುರಿತು ಪ್ರೊ. ಕೆ. ಎಸ್ ನಿಸಾರ್ ಅಹಮದ್ ಹೀಗೆ ಹೇಳಿದ್ದಾರೆ.
ಕೈಲಾಸಂ ಬಗೆಗೆ ಬಂದಿರುವ ಬಿಡಿ ಬರಹ ಹಾಗೂ ಪುಸ್ತಕಗಳು ಹೇರಳ. ಅವರ ವಿಲಕ್ಷಣ ಬದುಕಿನ ಹಾಗೂ ಪವಾಡಸದೃಶ ಸೃಷ್ಟಿಶೀಲ ಪ್ರತಿಭೆಯನ್ನು ಕುರಿತು ಬರೆದಿರುವ ಮಹನೀಯರೆಲ್ಲರ ಪುಸ್ತಕಗಳನ್ನು ಓದಿ, ಅಲ್ಲೆಲ್ಲ ಬರುವ ಹಲವಾರು ವಿವರಗಳಲ್ಲಿನ ಹೋಲಿಕೆ ಮತ್ತು ವಿರೋಧಾಭಾಸಗಳನ್ನು ಶ್ರದ್ಧೆಯಿಂದ ಪರಿಶೀಲಿಸಿ, ಸತ್ಯಕ್ಕೆ ಹತ್ತಿರವೆನ್ನಿಸುವ ಸಂಗತಿಗಳನ್ನು ಕೇಶವರಾವ್ 'ಕನ್ನಡಕ್ಕೊಬ್ಬನೇ ಕೈಲಾಸಂ' ಗ್ರಂಥದಲ್ಲಿ ದಾಖಲಿಸಿದ್ದಾರೆ.
'ಹಿಂದೆ ಇರಲಿಲ್ಲ ಮುಂದೆ ಹೇಗೋ' ಎನ್ನಿಸುವ ಅನನ್ಯ ಪ್ರತಿಭಾ ತೇಜೋನ್ವಿತ ವ್ಯಕ್ತಿಯೊಬ್ಬರ ನೆನಪನ್ನು ಹಚ್ಚಗಿಡುವಂಥ "ಕನ್ನಡಕೊಬ್ಬನೇ ಕೈಲಾಸಂ" ಕೃತಿಯನ್ನು ನೀಡಿದ ಬಿ.ಎಸ್ ಕೇಶವರಾವ್ ಅವರನ್ನು ನಾನು ಮನಸಾರ ಅಭಿನಂದಿಸುತ್ತೇನೆ.
Number of Pages
280
Publication Year
1997
Binding
Soft Bound
Author
B S Keshava Rao
Publisher
Ankitha Pusthaka
Height
10 CMS
Length
10 CMS
Weight
250 GMS
Width
1 CMS
Language
Kannada