ಊಟ ಮತ್ತು ನಿದ್ರೆಯಷ್ಟೆ ಸ್ವಾಭಾವಿಕವಾದುದು ಲೈಂಗಿಕಾಭಿವ್ಯಕ್ತಿ. ಆದರೆ ಅದರ ಬಗ್ಗೆ ನಾವು ರೂಪಿಸಿಕೊಂಡಿರುವ ಸಾಮಾಜಿಕ ನೀತಿ-ನಿಯಮಗಳು ಆ ಕುರಿತ ಮುಕ್ತ ಚರ್ಚೆಗೆ ಕಡಿವಾಣ ಹಾಕಿವೆ. ಆಧುನಿಕ ಜೀವನದ ಯುವ ಪೀಳಿಗೆ ಲೈಂಗಿಕತೆ ಬಗ್ಗೆ ಮುಕ್ತವಾಗಿ ಆಲೋಚಿಸುವ, ತಮ್ಮೊಳಗಿನ ಸಮಸ್ಯೆಗಳನ್ನು ಕುರಿತು ವೈದ್ಯರೊಟ್ಟಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳುವಲ್ಲಿ ಸ್ವಲ್ಪ ಸ್ವತಂತ್ರ ಭಾವನೆ ತೋರುತ್ತಿರುವುದು ಆರೋಗ್ಯ ಪೂರ್ಣ ಬೆಳವಣಿಗೆ. ಓದುಗರಿಂದ ತಮಗೆ ಬಂದ ಲೈಂಗಿಕ ಸಮಸ್ಯೆಗಳಿಗೆ ಡಾ|| ಪದ್ಮಿನಿ ಪ್ರಸಾದ್ ಸಲಹಾರೂಪದಲ್ಲಿ ನೀಡಿದ ಪರಿಹಾರಗಳ ಸಂಕಲನ ಈ ಪುಸ್ತಕ.