Product Description
ವಿಜ್ಞಾನಿ ಎಂಬ ಪದ ಸಾಮಾನ್ಯವಾಗಿ ಚಿತ್ರವಿಚಿತ್ರ ಹೊಗೆಗಳನ್ನು ಉಗುಳುತ್ತಿರುವ ಚಂಚುಪಾತ್ರೆಗಳು, ಪ್ರನಾಳಗಳು, ದುಬಾರಿ ಉಪಕರಣಗಳು ಮತ್ತು ಪುಸ್ತಕಗಳಿಂದ ಸುತ್ತುವರಿಯಲ್ಪಟ್ಟು, ಪ್ರಯೋಗಾಲಯದಲ್ಲಿ ಒಂಟಿಯಾಗಿ ಕುಳಿತಿರುವ ವ್ಯಕ್ತಿಯ ಚಿತ್ರವನ್ನು ಕಣ್ಮುಂದೆ ತರುತ್ತದೆ. ಆದರೆ ವಾಸ್ತವದಲ್ಲಿ, ವಿಜ್ಞಾನಿಗಳು ತಮ್ಮ ವ್ಯಕ್ತಿತ್ವಗಳಲ್ಲಿ ಬಹುಮುಖಗಳನ್ನೂ ಹೊಂದಿರುತ್ತಾರೆ. ಈ ಪುಸ್ತಕದಲ್ಲಿರುವ ಹಲವು ವಿಜ್ಞಾನಿಗಳು ಕಥೆ-ಕವಿತೆಗಳನ್ನೂ ಬರೆಯುತ್ತಿದ್ದರು; ಕೆಲವರಿಗೆ ಚಿತ್ರಕಲೆಯಲ್ಲಿ ಆಸಕ್ತಿಯಿದ್ದರೆ, ಮತ್ತೂ ಕೆಲವರಿಗೆ ಮೋಟಾರ್ ಬೈಕ್ಗಳ ಮೇಲೆ ವೇಗವಾಗಿ ಹೋಗುವುದೆಂದರೆ ಬಲು ಇಷ್ಟ! ಅನೇಕ ವಿಜ್ಞಾನಿಗಳು ತಮ್ಮ ಪ್ರಯೋಗಾಲಯಗಳ ಆಚೆಗಿನ ಸಮಾಜದೊಂದಿಗೂ ಅತಿ ಉತ್ಸಾಹದಿಂದ ತೊಡಗಿಕೊಂಡಿರುತ್ತಿದ್ದರು. ಪ್ರಪಂಚವನ್ನು ಒಂದು ಉತ್ತಮ ತಾಣವಾಗಿಸಲು ಶ್ರಮಿಸಿದರು. ಅವರ ಕೊಡುಗೆಗಳ ಜೊತೆಜೊತೆಗೆ ಅವರ ಜೀವನ-ಚಿತ್ರಗಳನ್ನು ಕೊಡುವ ಪ್ರಯತ್ನ ಇಲ್ಲಿದೆ. ವಿಜ್ಞಾನವನ್ನು ತೆಗೆದುಕೊಳ್ಳಲು ಬಾಲ್ಯದ ಅನುಭವ ಅವರಿಗೆ ಸ್ಫೂರ್ತಿ ನೀಡಿತೆ ? ಈ ವಿಜ್ಞಾನಿಗಳು, ವಿಶೇಷವಾಗಿ ಮಹಿಳಾ ವಿಜ್ಞಾನಿಗಳು ಏನೇನು ಅಡ್ಡಿಆತಂಕಗಳನ್ನು ಎದುರಿಸಿದರು ಹಾಗೂ ಹೇಗೆ ಅವನ್ನು ಮೀರಿ ನಿಂತರು ? ಅವರ ಜೀವನಗಳು ಕಿರಿಯರಲ್ಲಿ ಸ್ಫೂರ್ತಿ ತುಂಬುವುದೆಂಬುದು ನಮ್ಮ ಆಶಯ. ಉಜ್ವಲ ಕಿಡಿಗಳು ಹಿಂದಿನ 39 ಮಂದಿ ಸ್ಫೂರ್ತಿದಾಯಕ ಭಾರತೀಯ ವಿಜ್ಞಾನಿಗಳ ಕೊಡುಗೆಗಳು ಮತ್ತು ಜೀವನಗಳನ್ನು ಕಾಲಕ್ರಮಾಗತವಾಗಿ ದಾಖಲಿಸುತ್ತದೆ.