Select Size
Quantity
Product Description
ನಡುರಾತ್ರಿಯಲ್ಲಿ ಮಹಿಳೆಯೊಬ್ಬಳು ನಿರ್ಭಯದಿಂದ, ಏಕಾಂಗಿಯಾಗಿ ನಡೆದಾಡಿದಾಗ ಮಾತ್ರ ದೇಶಕ್ಕೆ ನಿಜವಾದ ಸ್ವಾತಂತ್ರ್ಯ ಬಂದಂತೆ ಎಂಬುದು ಮಹಾತ್ಮ ಗಾಂಧೀಜಿಯವರ ನುಡಿಗಳು. ಪ್ರಸ್ತುತ ಪುರುಷ ಪ್ರಧಾನ ರಾಷ್ಟ್ರ ಭಾರತದಲ್ಲಿ, ಮಹಿಳೆಯರು ಪುರುಷರಷ್ಟೇ ಸಮಾನವಾಗಿ, ಹಿಂದಿಗಿಂತಲೂ ಇಂದು ಹೆಮ್ಮರವಾಗಿ ಬೆಳೆದು ನಿಂತಿದ್ದಾರೆ. ಗಾಂಧೀಜಿಯವರ ದೂರಾಲೋಚನೆಗೆ ಇಂಬು ಎಂಬಂತೆ ಇಂದು ಜಾಗತಿಕ ಮಟ್ಟದಲ್ಲಿ ಮಹಿಳೆ ರತ್ನವಾಗಿ ಹೊಳೆಯುತ್ತಿದ್ದಾಳೆ.
ಪ್ರಾಚೀನ ಕಾಲದಲ್ಲಿ ಬರೀ ಭೋಗದ ವಸ್ತುವಾಗಿ, ಕ್ರಮೇಣ ಅಡುಗೆ ಮನೆಗೆ ಮೀಸಲಾಗಿ, ತನ್ನ ಸರ್ವಸ್ವವನ್ನೆಲ್ಲಾ ನಾಲ್ಕು ಗೋಡೆಗಳ ನಡುವೆಯೇ ಜೀವಿಸುತ್ತಿದ್ದವಳು ಇಂದು ಆಕಾಶದಲ್ಲಿ ಹಾರಾಡುತ್ತಿದ್ದಾಳೆ. ಗಡಿಯಲ್ಲಿ ಶತ್ರುಗಳ ಜೊತೆ ಕಾದಾಡುತ್ತಿದ್ದಾಳೆ. ಎಲ್ಲಾ ಅಡೆತಡೆಗಳನ್ನು ಮೀರಿ ಶಿಕ್ಷಣ, ಕಲೆ-ಸಾಹಿತ್ಯ, ವಿಜ್ಞಾನ-ತಂತ್ರಜ್ಞಾನ, ಆರ್ಥಿಕ, ಸಾಮಾಜಿಕ, ಉದ್ಯಮ, ಕ್ರೀಡೆ, ಸಮಾಜಸೇವೆ-ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಒಂದಿಷ್ಟು ಮಹಿಳೆಯರು ಛಾಪು ಮೂಡಿಸಿ, ಲಕ್ಷಾಂತರ ಮಹಿಳೆಯರಿಗೆ ಸ್ಫೂರ್ತಿಯಾಗಿದ್ದು ರಾಜ್ಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಘನತೆ, ಗೌರವವನ್ನು ಮುಗಿಲೆತ್ತರಕ್ಕೆ ಕೊಂಡೊಯ್ದ, ನಮ್ಮ ಹೆಮ್ಮೆಯ ಹದಿನಾಲ್ಕು ಸಾಧಕಿಯರ ಕಿರು ಪರಿಚಯ ಇಲ್ಲಿದೆ.
ಸಾಧಕಿಯರನ್ನೇ ಪರಿಚಯಿಸಿರುವುದು ಜಾಗತಿಕ ವಿದ್ಯಮಾನವಾಗಿರುವ ಮಹಿಳಾ ಸಬಲೀಕರಣದ ಮಹತ್ವದ ಮಣಿಹಕ್ಕೆ ನೀಡಿರುವ ಅಪೇಕ್ಷಣೀಯ ಕಾಣಿಕೆ ಎಂದು ಭಾವಿಸಿರುವೆ. ಅವರ ಸಾಧನೆಗಳಲ್ಲಿರುವ ವಿವಿಧತೆ, ವಿಶಿಷ್ಟ ರಂಗಗಳಲ್ಲಿ ಮೂಡಿಸಿರುವ ಛಾಪನ್ನು ಇಲ್ಲಿ ದಾಖಲಿಸಿದ್ದೇನೆ. ಸಾಧಕಿಯರಿಗೆ ಧನ್ಯತೆಯ ಭಾವವನ್ನು ಸೂಚಿಸುವ ಸಲುವಾಗಿ, ಹಾಗೆಯೇ ತರುಣಿಯರು ಏನನ್ನಾದರೂ ಸಿದ್ಧಿಸಿಕೊಳ್ಳಬೇಕೆನ್ನುವ ಮಹತ್ವಾಕಾಂಕ್ಷಿಗಳಿಗೆ ಪ್ರೇರಣೆ, ಮಾರ್ಗದರ್ಶನವನ್ನು ಮಾಡುವಲ್ಲಿ ಈ ಪುಸ್ತಕ ಸಫಲವಾಗುತ್ತದೆ ಎಂದು ನಂಬಿರುವೆ
Weight
300 GMS
Length
22 CMS
Width
20 CMS
Author
Dr Sukanya Soonagahalli
Publisher
Saahitya Loka Publications
Publication Year
2023
Number of Pages
110
Binding
Soft Bound
Language
Kannada