Select Size
Quantity
Product Description
ಈ ಕಾದಂಬರಿಯನ್ನು ಕುರಿತು ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ ಅವರು ಹೀಗೆ ಹೇಳಿದ್ದಾರೆ .
"ಸಾಹಿತ್ಯಕೃತಿಗಳು ಅನಾದಿಕಾಲದಿಂದಲೂ ಮಾನವೀಯ ಸಂಬಂಧದ ನೆಲೆಗಳನ್ನು ಹುಡುಕುತ್ತಿವೆ.ಈ ನೆಲೆ-ಬೆಲೆಗಳ ಹುಡುಕಾಟದಲ್ಲಿ ಅವು ಸದಾ ಮಗ್ನವಾಗಿವೆ.ಪ್ರೊ.ಎಚ್.ಟಿ.ಪೋತೆ ಹಿಂದಿನ ಕಥನಗಳ ನೇಯ್ಗೆಯನ್ನು ಬಳಸಿಕೊಂಡು ಇಂದಿನ ಮಾನವೀಯ ಸಂಬಂಧಗಳನ್ನು ಅನ್ವೇಷಿಸುತ್ತಿದ್ದಾರೆ.ಇಂಥ ಸಂಬಂಧಗಳ ಸೂಕ್ಷ್ಮ ಹುಡುಕಾಟದ ಫಲವೇ 'ಮಹಾಬಿಂದು' ಕಾದಂಬರಿ.ಪ್ರೊ.ಪೋತೆ ಜಾನಪದ ಸಾಹಿತ್ಯ,ಶಿಷ್ಟ ಸಾಹಿತ್ಯ,ವಿಚಾರ ಸಾಹಿತ್ಯ ಮುಂತಾದ ಹಲವು ನೆಲೆಗಳಿಂದ ಹೊರಟವರು.ಪ್ರಥಮವಾಗಿ ಇವರು ವೈಚಾರಿಕ ಪ್ರವೃತ್ತಿಯು ಸೃಜನಶೀಲತೆಯ ಬೆನ್ನನ್ನು ಏರಿದಾಗ 'ಮಹಾಬಿಂದು'ವಿನಂಥ ಕೃತಿ ಹೊರಬರಲು ಸಾಧ್ಯ.ಈ ಮಾತಿಗೆ ಪ್ರಸ್ತುತ ಕೃತಿಯೇ ಸಾಕ್ಷಿ.ವರ್ತಮಾನದ ಕೊರೊನ'ಪಿಡುಗು ಒಂದು ಸೃಜನಶೀಲ ರೂಪಕದ ನೇಯ್ಗೆಯಾಗಿದೆ.ಬುದ್ಧನ ಕಾಲದಿಂದ ಹಿಡಿದು ಈ ಕಾಲದ ಅಂಬೇಡ್ಕರ್ ವರೆಗೆ ಬಿಡಿಬಿಡಿ ಕಥನಗಳೆಲ್ಲವೂ ಕಾದಂಬರಿಯ ಸೂಕ್ಷ್ಮಹೆಣೆಗೆಯಲ್ಲಿ ಪಡಿಮೂಡಿಸಿಕೊಂಡಿವೆ.ಹೀಗಾಗಿ,ಇದೊಂದು ಹೊಸ ಬಗೆಯ ಪ್ರಯತ್ನವಾಗಿದೆ.ಹುಡುಕಾಟವೇನೋ ಹಳೆಯದು.ಆದರೆ,ನೋಡುವ ಕಣ್ಣುಮಾತ್ರ ಇಂದಿನದು.ವೈಚಾರಿಕ ಸಂಕಥನ ಮತ್ತು ಸೃಜನಶೀಲ ಸಂವೇದನೆಯ ಜೋಡು ಹೆಣಿಗೆಯಾಗಿ 'ಮಹಾಬಿಂದು'ನಿಮ್ಮ ಮುಂದಿದೆ.
Number of Pages
168
Author
Dr H T Pote
Binding
Hard Bound
Publisher
Ankitha Pusthaka
Publication Year
2022
ISBN-13
9789392230202
Weight
350 GMS
Width
15 CMS
Language
Kannada