Product Description
ಸಾವಿನ ಬಗ್ಗೆ ಚಿಂತಿಸುವುದು, ಮಾತನಾಡುವುದು ಕೂಡ ಒಂದು ಚೇತೋಹಾರಿಯಾದ ಅನುಭವವಾಗಬಲ್ಲದು ಎನ್ನುವುದಕ್ಕೆ ಸತ್ಯನಾರಾಯಣರ ಈ ಸಂಕಲನದ ಬರವಣಿಗೆಗಳು ಅತ್ಯುತ್ತಮ ಉದಾಹರಣೆಗಳಾಗಿವೆ. ಸಾವಿನೊಂದಿಗೆ ನಾವು ಬೆಳೆಸಿಕೊಳ್ಳಬೇಕಾದ ಸ್ನೇಹವನ್ನು ಸ್ವರೂಪವನ್ನು ಹಿಡಿದುಕೊಡುತ್ತವೆಂದೇ ಇಲ್ಲಿಯ ಬರಹಗಳು ನಮಗೆ ಮುಖ್ಯ. ಈ ಕಥನಗಳಲ್ಲಿ ಸಾವು ಮನುಷ್ಯನ ಮಿತಿಯ ಸಂಕೇತವಲ್ಲ. ಬದಲಿಗೆ ಸಾವು ಬದುಕಿನ ಕನ್ನಡಿಯಾಗಿ, ಗುರುವಾಗಿ, ಸಖ-ಸಖಿಯರಾಗಿ, ಕೊನೆಗೆ ಕರುಣಿಸುವ ದೈವವಾಗಿ ಗೋಚರಿಸುತ್ತದೆ. ಸಾವನ್ನು ‘ಪ್ರಸನ್ನ ಸಮ್ಮತಿ’ಯಲ್ಲಿ ಒಪ್ಪುವುದೆಂದರೆ ಬದುಕಿಗೆ, ಅದು ನಮಗೆ ಕೊಡುವ ಕೊಟ್ಟಿರುವ ಅಪೂರ್ವ ಅವಕಾಶಕ್ಕೆ ಸಲ್ಲಿಸುವ ಗೌರವ ಮತ್ತು ಕೃತಜ್ಞತೆ.