Quantity
Product Description
ನಿನ್ನ ನೆನಪ ಕುಡಿದವಳು-ಕವಯತ್ರಿ ಶ್ರೀಮತಿ ದೀಪಾ ಗೋನಾಳರ ಎರಡನೆಯ ಕವನ ಸಂಕಲನ. ಈ ಮೊದಲು ತಂತಿ ತಂತಿಗೆ ತಾಗಿ (೨೦೨೦) ಬೆಂಗಳೂರಿನ ನೌಟಂಕಿ ಪ್ರಕಾಶನ ಪ್ರಕಟಿಸಿತ್ತು. ದೀಪಾ, ಹಾವೇರಿ ಕೇಂದ್ರ ಅಂಚೆ ಕಛೇರಿಯಲ್ಲಿ ಉದ್ಯೋಗಿ. ಯಾವ ಮುಲಾಮು ಮುಲಾಜಿಲ್ಲದ ನೇರ ಮಾತಿನ ಸಹೃದಯಿ ಲೇಖಕಿ. ಸಾಮಾಜಿಕ ಜಾಲತಾಣಗಳಿಂದ, ಹಿರಿಕಿರಿ ಸಮಾನಮನಸ್ಕ ಲೇಖಕರೊಂದಿಗೆ ಸಹಜ ಬಾಂಧವ್ಯ. ಮಾತು, ಚರ್ಚೆ, ವಿಚಾರ ವಿನಿಮಯ ಆಗಾಗ ತೀರ್ಪಿನತ್ತ ಚಾಚುವ ಖಚಿತ ಮಾತುಗಾರಿಕೆ. ಹೀಗೆಂದೇ ದೀಪಾಳ ಬೆಳಕು ದೂರದೂರದವರೆಗೂ ಚೆಲ್ಲಿದೆ.
ನಿನ್ನ ನೆನಪ ಕುಡಿದವಳು-ಹೆಸರೇ ಎಲ್ಲ ಹೇಳುತ್ತದೆ. ಪರಸ್ಪರ ಸ್ಪಂದನ, ಅಗಾಧವಾಗಿ ಕಾಡುವ ಭಾವನಾತ್ಮಕ ಸಂಬಂಧಗಳು, ಅದರಾಚೆ ಇರುವ ಗಂಡು ಹೆಣ್ಣಿನ ನಿಕಟತೆಗಳ ಕಟು ಸತ್ಯದ ಹಲಗೆಯ ಮೇಲೆ ನಿಂತು ಬರೆದವು. ಸಮಯ ಸಂದರ್ಭಕಾಲದುರುಳಿನಲ್ಲಿ ಹೆಣ್ಭಾವ ವಿಚಾರಗಳು ಇಂದು ಬದಲಾಗಿವೆ. ಕಪ್ಪೆಚಿಪ್ಪಾಗದ ಬಂಧಗಳು ಒಂದು ಮುಕ್ತತೆಯಿಂದ, ಅಸಂಭವವಲ್ಲದ ಬಂಧಗಳನ್ನು ಕಟ್ಟಿಕೊಡುವುದೇ ಇಲ್ಲಿನ ಐವತ್ತೈದು ಕವಿತೆಗಳ ಜೀವಸತ್ವ, ಸಂಕಲನದ ಬಾಲಂಗೋಚಿಯಾದ ಮಾಗಿಯ ಕವಿತೆಗಳು ಇಲ್ಲಿವೆ. ಮನೋಲಹರಿಯ ಸಂಗಡ ಉಲ್ಲಸಿತಗೊಳಿಸುವ ಇವು ನಮ್ಮಂತರಂಗಕ್ಕೆ ತಾಕಿ, ತುಳುಕಿ, ಪುಳಕ ನೀಡದೆ ಇರಲಾರವು. ಪ್ರೀತಿ, ಕಾಮ, ಮೋಹ, ಆಕರ್ಷಣೆ ಏನೇನೋ ಫ್ರಾಯಿಡನ್ ಕಾಮ ಸಿದ್ಧಾಂತ ಇಲ್ಲಿ ಜೀವಝಲ್ಲರಿಯಾಗಿದೆ. ಕಟು ವಾಸ್ತವದ ನೆಲೆಯಲ್ಲಿ ಬರೆದ ಕವಿತೆಗಳು ನಮ್ಮೊಳಗಿಳಿದು, ಮನ ಮುಸುಕಲ್ಲಿ ಹೊಯ್ದಾಡುವ ಕಗ್ಗತ್ತಲಿನ ಪ್ರೀತಿ ಕಾಮ ಮೋಹಗಳ ಬಿಚ್ಚಿಟ್ಟು ಉಸಿರಿಗೆ ಹತ್ತಿರವಾಗುವವು.
ಸಂದೇಹ, ತರ್ಕ, ಕುಚೇಷ್ಟೆಗಳೇ ಪುರುಷ ಪ್ರಧಾನದ ಅವಗುಣಗಳಿಗೆ ಒಂದು ಶಾಕ್ಕೊಡುವ ದಿಟ್ಟತನ ಕವಯತ್ರಿಗಿದೆ. ಪ್ರಿಯತಮ, ಬಂಧು ಗೆಳೆಯ, ಬಾಳ ಸಂಗಾತಿ, ಅನಾಮಿಕ ಮೋಹನ ಕೂಡ ಈ ಕವಿತೆಗಳಾಳದ ಬಿಂಬಗಳು. ಗಂಗಾಧರ ಚಿತ್ತಾಲರ ಕಾಮಸೂತ್ರ ಕವಿತೆಯ ಎಲ್ಲ ಮಗ್ಗಲುಗಳನು ಬಿಡಿಬಿಡಿಯಾಗಿ ಕದಡಿ ಕವಲೊಡಿಸಿ ಚೆಲ್ಲಿದಂತಿವೆ.
Author
Deepa Gonala
Binding
Soft Bound
Number of Pages
200
Publication Year
2025
Publisher
Harivu Books
Height
2 CMS
Length
22 CMS
Weight
200 GMS
Width
14 CMS
Language
Kannada