Quantity
Product Description
ಓದು ಮತ್ತು ಬರವಣಿಗೆಯಲ್ಲಿ ನಿರಂತರವಾಗಿ ತಮ್ಮನ್ನು ತೊಡಗಿಸಿಕೊಂಡಿರುವ ಉದಯಕುಮಾರ್ ಹಬ್ಬು ಅವರು ಇಂಗ್ಲಿಷ್ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿ ನಿವೃತ್ತಿಯನ್ನು ಪಡೆದವರು. ಕಾದಂಬರಿ, ವಿಮರ್ಶೆ, ಇತಿಹಾಸ ಮತ್ತು ತಾತ್ವಿಕ ವಿಚಾರಗಳಿಗೆ ಸಂಬಂಧಪಟ್ಟ ಕೃತಿಗಳನ್ನು ರಚಿಸಿ ಪ್ರಕಟಿಸಿದ ಹಿರಿಮೆ ಇವರದು. ಬರವಣಿಗೆಗಿಂತ ಓದಿನಲ್ಲಿ ಹೆಚ್ಚು ಆಸಕ್ತಿಯಿರುವ ಹಬ್ಬು ಅವರು ಸಾವಿರಾರು ಕೃತಿಗಳನ್ನು ಓದಿ ಅರಗಿಸಿಕೊಂಡವರು. ಕೃತಿ ವಿಮರ್ಶೆಗಳನ್ನು ಬರೆಯುವ ಹವ್ಯಾಸದ ಮೂಲಕ ಬರಹಗಾರರಿಗೂ ಸ್ಫೂರ್ತಿಯಾದವರು. ಸಹೃದಯ ಓದುಗರಿಗೆ ಒಳ್ಳೆಯ ಸಾಹಿತ್ಯ ಕೃತಿಗಳನ್ನು ಪರಿಚಯಿಸಿದವರು. ಇವರು ಬರೆದಿರುವ ಹೆಚ್ಚಿನ ಎಲ್ಲ ವಿಮರ್ಶೆಗಳೂ ಕೃತಿ ರೂಪದಲ್ಲಿ ಪ್ರಕಟಗೊಂಡಿವೆ. ಅವುಗಳಲ್ಲಿ ‘ಓದಿನ ಮನೆ’ ಮುಖ್ಯವಾದುದು
‘ಓದಿನ ಮನೆ’ ವಿಮರ್ಶಕ ಸಂಕಲನದಲ್ಲಿ ಒಟ್ಟು ಅರುವತ್ತೆಂಟು ವಿಮರ್ಶಾ ಲೇಖನಗಳಿವೆ. ಈ ಕೃತಿಗೆ ಮುನ್ನುಡಿಯನ್ನು ನವನೀತ ಕಾರವರ, ಬೆನ್ನುಡಿಯನ್ನು ಡಾ.ನಾ.ಮೊಗಸಾಲೆಯವರು ಬರೆದಿದ್ದಾರೆ. ‘ಓದಿನ ಮನೆ’ ಹೆಸರೇ ಸೂಚಿಸುವಂತೆ ಹಬ್ಬು ಅವರು ಓದಿದ ಕೃತಿಗಳ ಸಂಗಮ ಈ ಸಂಕಲನದಲ್ಲಾಗಿದೆಯೆನ್ನಬಹುದು. ಕವಿತಾ ಸಂಕಲಗಳು, ಕತೆ ಕಾದಂಬರಿಗಳು, ಅನುವಾದಿತ ಕೃತಿಗಳು, ನಾಟಕಗಳು, ಹೀಗೆ ಬಹುವಿಧದ ಕೃತಿಗಳ ಸಂಕ್ಷಿಪ್ತ ಪರಿಚಯ ಈ ಕೃತಿಯ ಮೂಲಕ ಸಹೃದಯ ಓದುಗನಿಗೆ ಲಭಿಸುತ್ತದೆ.
Weight
200 GMS
Width
14 CMS
Length
22 CMS
Height
2 CMS
Publication Year
2025
Author
Udaya Kumar Habbu
Binding
Soft Bound
Number of Pages
236
Publisher
Gayathri Enterprises
Language
Kannada