Quantity
Product Description
ಶರಾವತಿ ಕಣಿವೆಯ ದಟ್ಟಡವಿಯೊಳಗೆ ಅಡಗಿರುವ 'ಸ್ವರ್ಣ ಬೆಟ್ಟ' ನಿಗೂಢತೆಯ ಕೋಟೆಯಾಗಿದೆ. ಸಾವಿರಾರು ವರ್ಷಗಳಿಂದ, ನಾಗಸೇನ ಮಹಾರಾಜನ ಅಪಾರ ನಿಧಿಯ ನಂಬಿಕೆ ಇದರ ಸುತ್ತ ಹರಡಿದೆ. ಆದರೆ ಈ ನಿಧಿಯ ಹಾದಿ ಜೀವಂತ ನರಕ. ಬೆಟ್ಟವನ್ನು ತಲುಪಲು ಪ್ರಯತ್ನಿಸಿದವರು ಮರಳಿ ಬಂದಿಲ್ಲ ಎಂಬ ಊಹಾಪೋಹಗಳು ಪಾವನೂರು ಗ್ರಾಮವನ್ನು ಆವರಿಸಿವೆ. ಊರಿನ ಜನರಿಗೆ 'ಸ್ವರ್ಣ ಬೆಟ್ಟ' ಕೇವಲ ದೂರದಿಂದ ನೋಡುವ ಒಂದು ಭೀಕರ ದೃಶ್ಯವಷ್ಟೇ. ಬಾಣಸಗೂರಿನ ಬೃಹತ್ ಬಂಡೆಯ ಹಿಂದೆ ಅಡಗಿರುವ ಆ ನಿಧಿದ್ದೀಪವನ್ನು ಅಜ್ಞಾತ ಶಕ್ತಿಗಳು ಕಾಯುತ್ತಿವೆ ಎಂಬುದು ಜನರ ಅಚಲ ನಂಬಿಕೆ. ಬೆಟ್ಟದ ಮೌನವನ್ನು ಪ್ರಶ್ನಿಸುವ ಧೈರ್ಯ ಯಾರಿಗೂ ಇರಲಿಲ್ಲ, ಇಲ್ಲಿಯವರೆಗೂ! ಆದರೆ ಆರು ದಿಟ್ಟ ವ್ಯಕ್ತಿಗಳು ಕತ್ತಲೆಯನ್ನು ಸೀಳಲು ಹೊರಟಿದ್ದಾರೆ: ತನಿಖಾ ಪತ್ರಕರ್ತ ಪ್ರದೀಪ್ ಬಾಲಯ್ಯ, ಗಂಭೀರ ಇನ್ಸ್ಪೆಕ್ಟರ್ ಸಮರ್, ಚಾಲಾಕಿ ಕಳ್ಳ ಭಾಸ್ಕರ, ರಹಸ್ಯಮಯಿ ಮೇನಕಾ, ಅರಣ್ಯ ರಕ್ಷಕ ಪ್ರಶಾಂತ ಮತ್ತು ಇತಿಹಾಸಕಾರ ಲಾರೆನ್ಸ್ ಪ್ರತಿಯೊಬ್ಬರಿಗೂ ಒಂದೇ ಗುರಿ - ಬೆಟ್ಟದ ಮೌನವನ್ನು ಭೇದಿಸುವುದು. ಬೆಟ್ಟದ ತುದಿಯವರೆಗೂ ಹತ್ತಿದವರಿಗೆ ಸಿಕ್ಕಿದ್ದೇನು? ಸ್ವರ್ಣಬೆಟ್ಟದಲ್ಲಿ ನಿಧಿಯ ಕಾವಲಿಗೆ ಮಂತ್ರವಾದಿಗಳು ನಿಜಕ್ಕೂ ಇದ್ದಾರೆಯೇ? ರಾಜ ನಾಗಸೇನನ ಮರಣ ಕೇವಲ ದಾಖಲೆಗಳಲ್ಲಿನ ಸತ್ಯವೋ ಅಥವಾ ಕೇಳದ ಕರಾಳ ಕಥೆಯೋ? ಈ ತಂಡ ಸತ್ಯಕ್ಕೆ ಹತ್ತಿರವಾದಷ್ಟೂ, ಅವರ ಜೀವಕ್ಕೆ ಅಪಾಯ ಹತ್ತಿರವಾಗುತ್ತದೆ. 'ಸ್ವರ್ಣ ಬೆಟ್ಟ' ನಿಜಕ್ಕೂ ನಿಧಿಯ ಸ್ಥಳವೋ, ಅಥವಾ ಯಾರೂ ಮರಳಿ ಬಾರದವರ ಗುಪ್ತ ಸಮಾಧಿಯೋ
Binding
Soft Bound
Author
Karthik Hegade
Number of Pages
170
Publisher
Avva Prakashana
Publication Year
2026
Height
2 CMS
Length
22 CMS
Weight
200 GMS
Width
14 CMS
Language
Kannada