Quantity
Product Description
ಹೆಚ್ ಎಸ್ ಶಿವಪ್ರಕಾಶರ ಕಾವ್ಯವನ್ನು ಕುರಿತು ಕವಿಯತ್ರಿ,ಬರಹಗಾರ್ತಿ, ಮರ್ಲೀನ್ ಪಾಸಿನಿ(ಮೆಕ್ಸಿಕೋ)ಅವರು ಹೀಗೆ ಹೇಳಿದ್ದಾರೆ.
ಹೆಚ್ ಎಸ್ ಶಿವಪ್ರಕಾಶರ ಕಾವ್ಯವನ್ನು ಪ್ರವೇಶಿಸುವುದೆಂದರೆ ಬದುಕಿನ ಆಧ್ಯಾತ್ಮಿಕತೆ,ಪ್ರಕೃತಿ,ಪ್ರೇಮಗಳ ಆಳಗಳ ತುದಿಯ ತನಕ ಹೋಗುವ ಧೈರ್ಯ ಮಾಡುವುದು. ಇಲ್ಲಿನ ಕವಿತೆಗಳು ಗತದ ಬಿಂಬಗಳನ್ನು ತೋರುವ ವಿಶ್ವದ ದರ್ಪಣಗಳು. ಇಲ್ಲಿನ ಜಾಗಗಳು,ದನಿಗಳು ಮೌನದಿರುಳುಗಳಲ್ಲಿ ಮರೆತುಹೋದವರನ್ನು ಕೂಗಿಕರೆಯುತ್ತವಾದರೂ ಅದರಾಚೆಗಿನ ಪ್ರಜ್ಞಾವಂತ ಹೃದಯಗಳಲ್ಲಿರುವ ವಿವೇಕವು ಏಕಾಕಿತನದಲ್ಲಿ ಒಂದು ಪದ್ಯವನ್ನು, ಸಾಂತ್ವನವನ್ನು ಹುಡುಕುವವರ ಆತ್ಮಗಳನ್ನು ಹಿತವಾದ ಪಿಸುಮಾತಿನಂತೆ ಸ್ಪರ್ಶಿಸುತ್ತವೆ. ಈ ರೀತಿಯಲ್ಲಿ ಭಾರತದ ಈ ಮಹಾನ್ ಕವಿಯ ಕವಿತೆಗಳು ಶಾಂತ ಅಲೆಗಳಂತೆ ಪಿಸಪಿಸನೆ ಮರ್ಮರಿಸಿದರೂ ಗುಡುಗಿನ ಶಕ್ತಿ ಮತ್ತು ವೇಗದಿಂದ ನೆನಪಿನಲ್ಲಿ ಸದಾ ನೆಲೆಸುತ್ತವೆ. ಇತಿಹಾಸದ ಕ್ಷಣಗಳನ್ನು, ದೇವತೆಗಳನ್ನು, ಸಿದ್ಧಪುರುಷರನ್ನು ತನ್ನ ಕಾವ್ಯಾತ್ಮಕ ಉಸಿರಿನಿಂದ ನೆನಪಿಸುತ್ತಾ ನಮ್ಮ ಮಾನವ ಪರಿಸ್ಥಿತಿಯ ನಡುವೆಯೂ ಗಗನವನ್ನು ಸೋಕುವ ಕಮಲದ ಗಂಧದಂತೆ ನಾವೂ ಅನಂತತೆಯನ್ನು ಮುಟ್ಟಬಹುದೆಂದು ಸೂಚಿಸುತ್ತದೆ.
Publication Year
2021
Binding
Soft Bound
Author
H S Shivaprakash
ISBN-13
9788195113163
Number of Pages
120
Publisher
Ankitha Pusthaka
Length
22
Weight
300
Width
20
Language
Kannada