Quantity
Product Description
ಕಾಲದೊಂದೊಂದೇ ಹನಿ’ ಹಿರಿಯ ಸಾಹಿತಿ ಸುಬ್ರಾಯ ಚೊಕ್ಕಾಡಿ ಅವರ ಅನುಭವ ಕಥನ. ಈ ಕಥನವನ್ನು ಅಂಜನಾ ಹೆಗಡೆ ನಿರೂಪಣೆ ಮಾಡಿದ್ದಾರೆ. ಈ ಕೃತಿಗೆ ಹಿರಿಯ ಲೇಖಕ, ಭಾಷಾ ವಿಜ್ಞಾನಿ ಕೆ.ವಿ. ತಿರುಮಲೇಶ್ ಅವರು ಬೆನ್ನುಡಿ ಬರೆದಿದ್ದಾರೆ. ಸಾಹಿತಿ, ಅಧ್ಯಾಪಕ, ಕೃಷಿಕ, ಗೃಹಸ್ಥ ಎಂಬೀ ಬಹುಮುಖಿ ವ್ಯಕ್ತಿ ನಮಗೆ ಸಾಹಿತಿಯೆಂದೇ ಪರಿಚಿತರು. ಕವಿತೆ, ನಾಟಕ, ಲೇಖನ ಪ್ರಕಾರಗಳಲ್ಲಿ ಸರಿಸಮಾನ ಸಾಧನೆಗಳನ್ನು ಅವರು ಮಾಡಿದ್ದರೂ, ಅವರ ಮುಖ್ಯ ಕೊಡುಗೆಯಿರುವುದು ಕವಿಯಾಗಿ ಎನ್ನುತ್ತಾರೆ ತಿರುಮಲೇಶ್. ಜೊತೆಗೆ ಅರುವತ್ತರ ದಶಕದಲ್ಲಿ ನವ್ಯ ಚಳುವಳಿಯ ಪ್ರಾದುರ್ಭಾವದ ಕಾಲದಲ್ಲಿ ಸಾಹಿತ್ಯ ಕ್ಷೇತ್ರವನ್ನು ಪ್ರವೇಶಿಸಿದ ಹಳ್ಳಿಗಾಡಿನ ಕವಿ ಚೊಕ್ಕಾಡಿ. ನನ್ನಂಥವರು ಹಳ್ಳಿ ಬಿಟ್ಟು ಪಟ್ಟಣ ಸೇರಿದರೆ ಚೊಕ್ಕಾಡಿ ತನ್ನ ಹುಟ್ಟೂರನ್ನು ಬಿಡಲಿಲ್ಲ. ಆದರೆ ಕಾಸರಗೋಡಿನ(ಈಗಿಲ್ಲದ) ಎಂ.ವ್ಯಾಸ(ಈಗಿಲ್ಲದ), ಎಂ.ಗಂಗಾಧರ ಭಟ್ಟ, ನಾನು ಹಾಗೂ ನೆರೆಯ ಸುಳ್ಯದ ಚೊಕ್ಕಾಡಿ ನಮ್ಮ ಕೋಶಾವಸ್ಥೆಯಲ್ಲಿ ಆಗಾಗ ಬೆರೆಯುವುದಿತ್ತು. ಆಗ ಬಹಳ ಮುಂಚೂಣಿಯಲ್ಲಿದ್ದವರು ಚೊಕ್ಕಾಡಿ. ಗೋಕುಲ ಪತ್ರಿಕೆಯಲ್ಲಿ ಅವರ ಅಸಮ ಸಾಲುಗಳ ಉದ್ದುದ್ದ ಕವಿತೆಗಳು ಪ್ರಕಟವಾಗಿ ನಮ್ಮನ್ನು ಬೆರಗುಗೊಳಿಸುತ್ತಿದ್ದವು ಎಂದು ನೆನಪಿಸಿಕೊಳ್ಳುತ್ತಾರೆ. ಈ ಇಡೀ ಕೃತಿಯಲ್ಲಿ ಸುಬ್ರಾಯ ಚೊಕ್ಕಾಡಿ ಅವರ ಸಾಹಿತ್ಯಿಕ ಕಥನವೂ ಬೆರಗುಗೊಳಿಸುವಂತೆ ಅನಾವರಣಗೊಂಡಿದೆ.
Binding
Soft Bound
Author
Anjana Hegade
Number of Pages
400
Publisher
Vikasa Prakashana
Publication Year
2021
Length
22 CMS
Weight
500 GMS
Width
14 CMS
Height
3 CMS
Language
Kannada