Select Size
Quantity
Product Description
ಭಾರತೀಯರ ಮನೆ ಮನಗಳಲ್ಲಿ ಜೀವಂತವಾಗಿ ಉಳಿಯುವ ಹಾಗೂ ಎಂದೆಂದಿಗೂ ಆದರ್ಶಪ್ರಾಯವಾದ ರಾಜನೆಂದರೆ ಅಶೋಕ, ಅಶೋಕ ಸ್ತಂಭ ಮತ್ತು ಅಶೋಕ ಚಕ್ರ ಇವು ಭಾರತೀಯ ಪರಂಪರೆಯ ಸಂಕೇತಗಳು. ಭಾರತದ ಇತಿಹಾಸದ ಹೊಸದಿಕ್ಕಿಗೆ ನಾಂದಿ ಹಾಡಿದ ಮಹಾಚೇತನ ಅಶೋಕ. ಇತಿಹಾಸದಲ್ಲಿ ಸರ್ವಕಾಲೀನ ಜನಪ್ರಿಯತೆಗೆ ಕಾರಣ ಎಂಬ ಕುತೂಹಲಕ್ಕೆ ಈ ಸಂಶೋಧನಾ ಗ್ರಂಥದಲ್ಲಿ ಡಾ.ಸಿ.ಚಂದ್ರಪ್ಪ ದಾಖಲಿಸಿದ್ದಾರೆ. ಭಾಷಾಶಾಸ್ತ್ರ, ಶಾಸನಶಾಸ್ತ್ರ, ಭೂಉತ್ಪನನಗಳು, ವಾಸ್ತುಶಿಲ್ಪ ಮುಂತಾದ ಹಲವು ಜ್ಞಾನಶಾಸ್ತ್ರಗಳನ್ನು ಒಳಗೊಂಡ ಅಪರೂಪದ ಕೃತಿಯಾಗಿದೆ.
ಚಕ್ರವರ್ತಿ ಅಶೋಕನ ಸಮಗ್ರ ಇತಿಹಾಸವು ಕನ್ನಡದ ಕನ್ನಡಿಯಲ್ಲಿ ಮೂಡಿ ಬಂದಿಲ್ಲವಾದರೂ ಇತಿಹಾಸ ಪ್ರಾಧ್ಯಾಪಕರಾದ ಡಾ.ಸಿ.ಚಂದ್ರಪ್ಪನವರ ಈ ಕೃತಿ ಅಂಥ ಗಂಭೀರ ಪ್ರಯತ್ನಗಳಲ್ಲೊಂದು. ಅಖಂಡ ಭಾರತವನ್ನು ಕ್ರಿ.ಪೂ. 3ನೇ ಶತಮಾನದಲ್ಲಿ ಆಳಿದ ಅಶೋಕನ ಚರಿತ್ರೆಯನ್ನು ಸಂಶೋಧನೆಯ ಮೂಲಕ ಕನ್ನಡಕ್ಕೆ ತರುವುದು ಸವಾಲಷ್ಟೆ ಅಲ್ಲ. ಅಸಾಧ್ಯವೂ ಆಗಿದೆ. ಹೀಗಾಗಿ ಚಕ್ರವರ್ತಿ ಅಶೋಕನ ಸಮಗ್ರ ಜೀವನ ಚರಿತ್ರೆಯನ್ನು ಕನ್ನಡದ ಓದುಗರ ಕೈಗಿಟ್ಟಿದ್ದಾರೆ. ಈ ದಿಸೆಯಲ್ಲಿ ಪ್ರಾಧ್ಯಾಪಕರಾದ ಡಾ. ಸಿ. ಚಂದ್ರಪ್ಪನವರು ಚರಿತ್ರೆಯ ಒಳನೋಟಗಳನ್ನು ವಿಶಿಷ್ಟವಾಗಿ ಕಟ್ಟಿಕೊಡುವಲ್ಲಿ ಯಶಸ್ಸು ಸಾಧಿಸಿದ್ದಾರೆ. ಹಾಗಾಗಿ ಡಾ.ಸಿ.ಚಂದ್ರಪ್ಪನವರನ್ನು ಮನದುಂಬಿ ಹಾರೈಸುತ್ತೇನೆ.
Publisher
Sapna Book House Pvt Ltd
Publication Year
2023
ISBN-13
9789354564000
Binding
Hard Bound
Author
Dr C Chandrappa
Number of Pages
771
Height
8 CMS
Weight
900 GMS
Width
15 CMS
Length
22 CMS
Language
Kannada