ವಿಜ್ಞಾನ ಬರಹಗಾರ ಪ್ರೊ. ಜೆ.ಆರ್. ಲಕ್ಷ್ಮಣರಾವ್ ಅವರ ಕೃತಿ-ಜನಸಾಮಾನ್ಯರಿಗೆ ಎಂಥಹ ವಿಜ್ಞಾನ ಬೇಕು?. ವಿಜ್ಞಾನ ಮತ್ತು ಸಾಮಾಜಿಕ ಮೌಲ್ಯಗಳು, ವೈಜ್ಞಾನಿಕ ಶಿಕ್ಷಣ ಮತ್ತು ಭಾಷಾ ಸಮಸ್ಯೆ, ಪಾರಿಭಾಷಿಕ ಪದಗಳ ಸಮಸ್ಯೆ, ವೈಜ್ಞಾನಿಕ ಸಂಶೋಧನೆಯ ಪ್ರಗತಿ, ವೈಜ್ಞಾನಿಕ ಮನೋವೃತ್ತಿ ಇತ್ಯಾದಿ ಹಲವು ವಿಷಯಗಳ ಮೇಲೆ ಬೆಳಕು ಚೆಲ್ಲುವ ಲೇಖನಗಳನ್ನು ಸಂಕಲಿಸಲಾಗಿದೆ. ವಿಜ್ಞಾನ ಸಂಶೋಧನೆಯ ಫಲಗಳು ಎಲ್ಲರಿಗೂ ದೊರೆಯಬೇಕು. ಆಗಲೇ ವಿಜ್ಞಾನ ಬೆಳವಣಿಗೆಯ ಸಾರ್ಥಕತೆ ಎಂಬುದನ್ನು ಈ ಕೃತಿಯು ತಿಳಿಸುತ್ತದೆ.