ಖಗೋಳಶಾಸ್ತ್ರದ ಬಗ್ಗೆ ನಮಗೆ ಈಗ ಇರುವ ತಿಳುವಳಿಕೆ ರಾತ್ರೋರಾತ್ರಿಯೇನೂ ಬರಲಿಲ್ಲ. ಸಾವಿರಾರು ವರ್ಷಗಳ ಅಧ್ಯಯನಗಳಿಂದ ಹುಟ್ಟಿರುವ ಖಗೋಳ ಜ್ಞಾನವಿದು. ಖಗೋಳ ವಿಜ್ಞಾನದ ಚರಿತ್ರೆ ಮಾನವಜಾತಿಯ ಚರಿತ್ರೆಯಷ್ಟೇ ವಿಸ್ತಾರವಾಗಿದೆ. ಆದ್ದರಿಂದಲೇ ವಿಜ್ಞಾನದಷ್ಟೇ ಸ್ವಾರಸ್ಯಕರ ಮತ್ತು ಜಟಿಲ ಈ ಚರಿತ್ರೆ. ಚಿತ್ರಗಳನ್ನೊಳಗೊಂಡ ಈ ಪುಸ್ತಕ ಖಗೋಳ ವಿಜ್ಞಾನದ ವಿವರಣೆಯಲ್ಲ. ಇದು ಅದರ ಹುಟ್ಟು ಮತ್ತು ಬೆಳವಣಿಗೆಗಳನ್ನು ಕಥೆಯ ರೂಪದಲ್ಲಿ ಹೇಳುವ ಪ್ರಯತ್ನ ಮಾತ್ರ.