Product Description
ರಾಮಾಯಣದ ಹುಟ್ಟಿಗೆ ಕ್ರೌಂಚ ಪಕ್ಷಿಯ ಸಾವು ಕಾರಣವಾದರೆ, ಸಲೀಂ ಅಲಿ ಎನ್ನುವ ಹುಡುಗನಲ್ಲಿ ಪಕ್ಷಿಶಾಸ್ತ್ರಜ್ಞನೊಬ್ಬನು ಹುಟ್ಟಲು ಒಂದು ಗುಬ್ಬಿಯ ಸಾವು ಕಾರಣವಾಯಿತು. ಗಂಡು ಮತ್ತು ಹೆಣ್ಣು ಗುಬ್ಬಿಗಳು ಗೂಡು ಕಟ್ಟಿದ್ದವು. ಹೆಣ್ಣು ಗೂಡಿನಲ್ಲಿದ್ದ ಮೊಟ್ಟೆಗೆ ಕಾವು ಕೊಡುತ್ತಿದ್ದರೆ ಗಂಡು ಸುತ್ತಮುತ್ತಲೂ ಹಾರಾಡುತ್ತಾ ಗೂಡಿಗೆ ರಕ್ಷಣೆಯನ್ನು ಕೊಡುತ್ತಿತ್ತು. ಇದನ್ನು ಕಂಡ ಬಾಲಕ ತನ್ನ ಬಳಿಯಿದ್ದ ಪಿಸ್ತೂಲಿನಿಂದ ಗಂಡು ಹಕ್ಕಿಗೆ ಗುಂಡು ಹಾರಿಸಿದ. ಗಂಡು ಹಕ್ಕಿ ಸತ್ತು ಬಿತ್ತು. ಹೆಣ್ಣು ಹಕ್ಕಿ ಹೊರಗೆ ಹಾರಿಹೋಗಿ ಮತ್ತೊಂದು ಗಂಡು ಹಕ್ಕಿಯನ್ನು ಗೂಡು ಕಾಯಲು ಕರೆತಂದಿತು. ಅಲಿ ಆ ಹಕ್ಕಿಯನ್ನೂ ಕೊಂದ. ಹೆಣ್ಣು ಹಕ್ಕಿ ಮತ್ತೊಂದು ಗಂಡನ್ನು ಕರೆತಂದಿತು. ಹೀಗೆ ಎಂಟು ಸಲ ಗಂಡು ಗುಬ್ಬಿಗಳನ್ನು ಕೊಂದಾಗ ಆ ಎಂಟನ್ನೂ ಅಲಿ ಕೊಂದ.
ಒಂದು ಸಲ ಗುಬ್ಬಿಯ ಕುತ್ತಿಗೆಯ ಬಳಿ ಬೂದು ಬಣ್ಣದ ಗೆರೆಯ ಬದಲು ಹಳದಿ ಬಣ್ಣ್ದ ಗೆರೆಯಿರುವುದನ್ನು ಕಂಡ. ಕುತೂಹಲವಾಯಿತು. ತನ್ನ ಮಾವ ಅಮೀರುದ್ದೀನ್ ಅವರಿಗೆ ತೋರಿಸಿದ. ಅವರು ಅಲಿಯನ್ನು ‘ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ’ಗೆ ಕರೆತಂದರು. ಮುಂದೆ ನಡೆದದ್ದು ಇತಿಹಾಸ!