Quantity
Product Description
ಶ್ರೀಯುತ ಕಿರಣ್ ಹಿರಿಸಾವೆ ನಮ್ಮ ನಡುವಣದ ಉದಯೋನ್ಮುಖ ಕತೆಗಾರರು. ಅವರ ಬರವಣಿಗೆಯಲ್ಲಿ ಒಂದು ಸಮ್ಮೋಹನದ ಶಕ್ತಿಯಿದೆ. ಇದು ಓದುಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತದೆ. ಇವರದೇ ನೀಳತೆಗಳಾದ 'ಲಿಚ್ಛಪಿ', 'ಚಚ್ಚೌಕದ ಬಾವಿ' ಕತೆಗಳೂ ಕೂಡಾ ಹಲವು ವಾಟ್ಸಾಪ್ ಬಳಗಗಳಲ್ಲಿ ಪ್ರಕಟಗೊಂಡು ಜನಪ್ರಿಯವಾಗಿವೆ.
'ಹರಿವು' ನಮ್ಮ ಪರಂಪರೆಯ ಪರಿಚಯದ ಜೊತೆಗೆ ವಿಜ್ಞಾನದ ವಿವರಗಳನ್ನೂ ಒಳಗೊಂಡು ಸಹೃದಯನ ಮನವನ್ನು ತಟ್ಟುತ್ತದೆ. ಕಥಾನಾಯಕಿ ನಿರ್ಮಲಾ ನಿರ್ಮಲವಾದ ತರಂಗಿಣಿಯಂತೆಯೇ ಶೋಭಿಸುತ್ತಾಳೆ. ಸಹಜವಲ್ಲದ ತಾಯ್ತನವು ಕೊಡುವ ಒಳತುಮುಲಗಳ ಪ್ರವಾಹ ಇಲ್ಲಿ ಗಂಗೆಯಂತೆಯೇ ಹರಿದು ಇರುಳ ನಡುವೆ ಬೆಳಕ ಅರಸಿ ಹೋಗುವ ಹೆಣ್ತನದ ಹುರುಳು ಅರಳಿದೆ.
ಇತ್ತೀಚಿನ ಬರಹಗಾರರಲ್ಲಿ ಕಣ್ಣರಳಿಸಿ ನೋಡಬಹುದಾದ ಪ್ರತಿಭಾವಂತ ಶ್ರೀಯುತ ಕಿರಣ್ ಹಿರಿಸಾವೆರವರ 'ಹರಿವು' ಕತೆ ನದಿಯ ಪ್ರತಿಮೆಯೊಂದಿಗೆ ಸಾಕಷ್ಟು ಕಾಲ ಓದುಗರ ಮನದಲ್ಲಿ ನೆಲೆ ನಿಲ್ಲುತ್ತದೆ. ಎಲ್ಲರೂ ಈ ಕೃತಿಯನ್ನು ಕೊಂಡು ಓದಿ ಕಿರಣ್ ಹಿರಿಸಾವೆಯಂತಹ ಅದ್ಭುತ ಬರಹಗಾರರನ್ನು ಪ್ರೋತ್ಸಾಹಿಸಬೇಕಾಗಿ ಕೋರುತ್ತೇನೆ. ಒಳಿತಾಗಲಿ.
-ತನಾಶಿ
(ಟಿ.ಎನ್.ಶಿವಕುಮಾರ್)
ಮುಖ್ಯ ಆಡಳಿತಾಧಿಕಾರಿಗಳು, ನ್ಯಾಯಾಂಗ ಇಲಾಖೆ, ಮಂಡ್ಯ. ಕವಿಗಳು, ವ್ಯಾಖ್ಯಾನಕಾರರು, ಡಿವಿಜಿ ಪ್ರಶಸ್ತಿ ಪುರಸ್ಕೃತರು
ಚಲನಶೀಲತೆ ಈ ಕಾದಂಬರಿಯ ಮುಖ್ಯವಾದ ಪ್ರತಿಮೆ ಎಂದು ನನ್ನ ಭಾವನೆ. ಚಲನೆ ಎಡೆಬಿಡದೆ ನಿರ್ಮಲಾಳನ್ನು ಭಾವಲೋಕದಿಂದ ಭಾವನೆಗಳ ಲೋಕಕ್ಕೆ, ವಾಸ್ತವ ಲೋಕದಿಂದ ಯಥಾರ್ಥವಾದ ಆತ್ಮ ಶುದ್ದಿಯ ಮತ್ತು ಮುಂದುವರಿದು ಆತ್ಮ ಬೋಧೆಯ ಪ್ರಪಂಚಕ್ಕೆ ತೆಗೆದುಕೊಂಡು ಹೋಗುತ್ತದೆ. ಹೀಗೆ ಎಲ್ಲೆಲ್ಲಿ ನೋಡಿದರೂ ಬದುಕಿನ ಚಲನಶೀಲತೆಯನ್ನು ಬರವಣಿಗೆಯ ಮೂಲಕ ಸೆರೆ ಹಿಡಿಯಲು ಕಿರಣ್ ಅವರು ಪ್ರಯತ್ನಿಸಿದ್ದಾರೆ.
ಡಾ. ಜಿ.ಬಿ. ಹರೀಶ (ಮುನ್ನುಡಿಯಿಂದ)
Author
Kiran Hirisave
Binding
Soft Bound
Number of Pages
100
Publication Year
2025
Publisher
Kadamba Prakashana
Height
1 CMS
Length
22 CMS
Weight
100 GMS
Width
14 CMS
Language
Kannada