Quantity
Product Description
ಚೈನು ಎಳೆದದ್ದು ನಾನೇ...! ಕಲ್ಲಿನ ಗುಡಿಯಲ್ಲಿರುವವನಿಗೆ ಕೇಳಿಸುತ್ತದೆ, ಕಾಣಿಸುತ್ತದೆ ಅಂದುಕೊಳ್ಳುತ್ತೀರಾದರೆ ಕಬ್ಬಿಣದ ಗಾಡಿಯಲ್ಲಿರುವವನಿಗೆ ಕೇಳಿಸುವುದಿಲ್ಲವೇ? ಕಾಣಿಸುವುದಿಲ್ಲವೇ? ಬಿಳಿ ಬಟ್ಟೆಯನ್ನು ಹೊದ್ದುಕೊಂಡ ಪ್ರಯಾಣಿಕರು ಶವಾಗಾರದಲ್ಲಿನ ಹೆಣಗಳ ಹಾಗೆ ಮಲಗಿಕೊಂಡಿದ್ದರೂ ನಾನು ಎಚ್ಚರವಾಗಿರುತ್ತೇನೆ (...ಪ್ರಯಾಣಿಕರೇ ದಯವಿಟ್ಟು ಗಮನಿಸಿ)
ಕಾಮ... ಮುಕ್ತ ಕಾಮ...! ಬೆತ್ತಲೆ ಜೋಡಿಗಳು. ಎಲ್ಲಾ ಜೋಡಿಗಳದ್ದು ಹತ್ತಿಪ್ಪತ್ತು ಸೆಕೆಂಡುಗಳ ಹೊರಳಾಟವಷ್ಟೇ. ಕೆಲವೇ ನಿಮಿಷಗಳ ಒಳಗೆ ಕಪ್ಪು ದ್ರವವನ್ನು ವಾಂತಿ ಮಾಡುತ್ತಿದ್ದ ಯುವತಿಯರ ಹೊಟ್ಟೆ ರಾಸಾಯನಿಕ ಗೊಬ್ಬರ ಉಂಡು ವೇಗವಾಗಿ ಬೆಳೆಯುವ ತರಕಾರಿಗಳ ಹಾಗೆ ಉಬ್ಬುತ್ತಿತ್ತು...! (...ಬ್ರಹ್ಮ ಮುಹೂರ್ತ )
ಅವಳು 'ಹೊಟ್ಟೆಯಲ್ಲಿ ಮಗು ಬೆಳೆಯುತ್ತಿದೆ, ಮದುವೆ ಮಾಡಿಕೊಳ್ಳುತ್ತಿಯಾ?' ಎಂದು ಕೇಳಿದಾಗಲೂ ಅವನು ಜಾತಿಪಾತಿಯ ಮಾತು ಆಡಲಿಲ್ಲ. ಮಡಿಮೈಲಿಗೆ ಎಂದು ಕೈ ಬಿಡಿಸಿಕೊಳ್ಳಲಿಲ್ಲ. ಕಣ್ಣಲ್ಲಿ ನೀರು ತಂದುಕೊಂಡವನು 'ಅಪ್ಪ ದೊಡ್ಡ ಮನೆಯ ಹುಡುಗಿಯನ್ನು ನೋಡುತ್ತಿದ್ದಾರೆ, ನಿನ್ನನ್ನು ಹೇಗೆ ಮದುವೆ ಮಾಡಿಕೊಳ್ಳುವುದು ಶೋಭಾ?' ಎಂದಷ್ಟೇ ಹೇಳಿದ್ದ (...ಮುಚ್ಚಳವಿಲ್ಲದ ಬಾಟ್ಲಿಯೂ, ಕಜ್ಜಿ ನಾಯಿಯೂ )
Binding
Soft Bound
ISBN-13
9788198921079
Publication Year
2025
Author
M Manohara Pai
Number of Pages
116
Publisher
Sasi Prakashana, Mysuru
Height
1 CMS
Weight
200 GMS
Width
14 CMS
Length
22 CMS
Language
Kannada