Quantity
Product Description
ಕರ್ನಾಟಕದಲ್ಲಿ ಪುಟ್ಟಪ್ಪನವರು (ಕುವೆಂಪು) ಅತ್ಯುನ್ನತ ಗೌರವ, ಆದರಗಳಿಗೆ ಪಾತ್ರರಾಗಿದ್ದಾರೆ. ಅವರು ಕನ್ನಡದ ಸಾರ್ವಕಾಲಿಕ ದೈತ್ಯ ಪ್ರತಿಭೆ ಎನ್ನುವುದನ್ನು ಸಾರ್ವತ್ರಿಕವಾಗಿ ಒಪ್ಪಲಾಗಿದೆ. ಕಣ್ಮರೆಯಾಗಿ 30 ವರ್ಷಗಳ ಮೇಲಾದರೂ ಪ್ರತಿದಿನ ಒಂದಲ್ಲ ಒಂದು ರೀತಿಯಲ್ಲಿ ಅವರು ಹೆಸರು ಕೇಳಿ ಬರುತ್ತಿದೆ, ಅವರ ಚಿಂತನೆಗಳು ಚರ್ಚಿಸಲ್ಪಡುತ್ತಿವೆ. ರಾಜ್ಯದ ಉದ್ದಗಲಗಳಲ್ಲಿ ಅವರ ವಿಗ್ರಹಗಳು ನಿಲ್ಲಿಸಲ್ಪಟ್ಟಿವೆ, ಅವರ ಹೆಸರಿನಲ್ಲಿ ಪ್ರಶಸ್ತಿಗಳು ಸ್ಥಾಪಿಸಲ್ಪಟ್ಟಿವೆ; ನೂರಾರು ಸಾರ್ವಜನಿಕ ಆಸ್ತಿಗಳಿಗೆ ಅವರ ಹೆಸರನ್ನು ಇಡಲಾಗಿದೆ. ಹಾಗೆಯೇ ಅವರ ಹೆಸರಿನಲ್ಲಿ ಹತ್ತಾರು ಶೈಕ್ಷಣಿಕ ಸಂಸ್ಥೆಗಳಿವೆ, ಅವರು ಮತ್ತು ಅವರ ಚಿಂತನೆಗಳನ್ನು ಕುರಿತಾಗಿ ಹತ್ತಾರು ವೇದಿಕೆಗಳಿಂದ ನೂರಾರು ಕಾರ್ಯಕ್ರಮಗಳು ನಡೆಯುತ್ತಿವೆ. ಅವರನ್ನು ರಸಋಷಿ ಎಂದು ಕೆಲವರು ಭಾವಿಸಿದ್ದರೆ, ಇನ್ನೂ ಕೆಲವರಿಗೆ ಅವರು ಯುಗದ ಕವಿ-ಜಗದ ಕವಿಯಾಗಿ ಕಂಡಿದ್ದಾರೆ. ಮತ್ತೆ ಹಲವರಿಗೆ ವೈಚಾರಿಕ ಕ್ರಾಂತಿಕಾರಿಯಾಗಿ ಶೂದ್ರ ಜನಾಂಗದ ಪ್ರಾತಿನಿಧಿಕ ಪ್ರತಿಭೆಯಾಗಿ ಭಾಸವಾಗಿದ್ದಾರೆ.
ಇಡೀ ಕರ್ನಾಟಕವೇ ಹಾಡಿ, ಹೊಗಳಿ ಆರಾಧಿಸುತ್ತಿರುವ ಕುವೆಂಪು ಅವರನ್ನು ವಿಮರ್ಶೆ ಮಾಡುವ ಅಗತ್ಯವಿಲ್ಲ ಅಂತಹ ವಿಮರ್ಶೆ ಮಾಡುವ ಯೋಗ್ಯತೆ ಯಾರಿಗಿದೆ ಎಂದು ಭಾಸವಾಗಬಹುದಾದರೂ ಎಂದಾದರೂ, ಯಾರಾದರೂ ಹೊರಗೆ ಕಾಣುವ ಕುವೆಂಪು, ಒಳಗಿರುವ ಪುಟ್ಟಪ್ಪ ಒಂದೇ ಆಗಿದ್ದರೆ ಅಥವಾ ಆ ಇಬ್ಬರ ನಡುವೆ ನುಡಿ- ನಡೆಗಳಲ್ಲಿ, ಬರಹ-ಬದುಕುಗಳಲ್ಲಿ ಬಿರುಕುಗಳು ಇದ್ದವೆ ಎಂದು ನೋಡಬೇಕಾದ ಅನಿವಾರ್ಯತೆ ಇದೆ. ಅಭಿಮಾನಿ, ಅನುಯಾಯಿಗಳು ಕಡೆದು ನಿಲ್ಲಿಸಿರುವ ದಿವ್ಯ ಮೂರ್ತಿ ಕುವೆಂಪು ಏನು ಹೇಳಿದರು ಎನ್ನುವುದಕ್ಕಿಂತ ಹೇಗೆ ಬಾಳಿದರು ಎಂದು ಹುಡುಕುವ ಪ್ರಯತ್ನ ಈ ಪುಸ್ತಕದಲ್ಲಿದೆ. ಇದು ವೈಚಾರಿಕತೆಯನ್ನು ಪ್ರತಿಪಾದಿಸುತ್ತಿದ್ದ ಕುವೆಂಪು ಅವರಿಗೆ ಗೌರವದ ಒಡಕು ನೋಟದ ಕಾಣಿಕೆ.
Author
N Shankarappa Toranagallu
Binding
Soft Bound
Number of Pages
318
Publication Year
2025
Publisher
Kavyakala Prakashana, Bangalore
Height
3 CMS
Length
22 CMS
Weight
500 GMS
Width
14 CMS
Language
Kannada