Quantity
Product Description
ಅವರು ನಮ್ಮ ಒಗ್ಗಟ್ಟನ್ನು ಮುರಿಯಲು ಸುಲಭ ದಾರಿ ಕಂಡುಕೊಂಡಿದ್ದಾರೆ. ಅದು ಸಿಂಪಲ್ ದಾರಿ. ನಮಗೂ ಗೊತ್ತಿರುವ ದಾರಿ! ಆದರೂ ನಾವು ಎಚ್ಚೆತ್ತುಕೊಂಡಿಲ್ಲ!
ಒಮ್ಮೆ ಧರ್ಮ, ಇನ್ನೊಮ್ಮೆ ಜಾತಿ, ಮತ್ತೊಮ್ಮೆ ಲಿಂಗ, ಮಗದೊಮ್ಮೆ ಬಣ್ಣ ಹೀಗೆ ಒಂದಲ್ಲ ಒಂದು ಬಾಂಬುಗಳನ್ನು ನಮ್ಮ ನಡುವೆ ತಂದಿಡುತ್ತಲೇ ಇರುತ್ತಾರೆ. ಆ ಬಾಂಬಿಗೆ ಸಿಡಿಯುವ ಶಕ್ತಿ ಇದೆಯಾ? ಸಿಡಿದರೆ ಎಷ್ಟು ಜನ ಆಹುತಿಯಾಗಬಹುದು? ಆ ಬಾಂಬನ್ನು ನಿಷ್ಕ್ರಿಯಗೊಳಿಸುವ ದಾರಿ ಯಾವುದು? ಎಂಬ ಸಣ್ಣಪುಟ್ಟ ಆಲೋಚನೆಗಳೂ ನಮ್ಮ ಮನಸ್ಸನ್ನು ಕದಡುವುದಿಲ್ಲ. ಹೊರತಾಗಿ ಬಾಂಬಿನ ಬಗ್ಗೆ ಹರಡುವ ಊಹಾಪೋಹಗಳಿಗೆ ಕಿವಿ ಕೊಡುತ್ತೇವೆ. ಕೇಳಿದ್ದೆಲ್ಲಾ ಸತ್ಯ ಅನ್ನುವಹಾಗೆ ಒಂದಷ್ಟು ದಿನ ಹಾರಾಡುತ್ತೇವೆ. ಅಲ್ಲಿಗೆ ಇನ್ನೊಂದು ಹೊಸ ಬಾಂಬು ಬಂದು ಬೀಳುತ್ತದೆ. ನಮ್ಮ ಚಿತ್ತ ಅತ್ತ ಹಾಯುತ್ತದೆ. ಹೀಗೇ ನಮ್ಮನ್ನು ಈ ಬಾಂಬುಗಳು ಸದಾ ಬ್ಯುಸಿಯಾಗಿರುವಂತೆ ಮಾಡುತ್ತವೆ.
ನಮ್ಮ ಸಮಯ, ಹಣ, ಶಕ್ತಿ, ಸೃಜನಶೀಲತೆ ಎಲ್ಲವೂ ಹಾಳಾಗುವುದು ಹೀಗೇ.. ಹಾಗಾದರೆ ಈ ಎಲ್ಲವನ್ನು ಬಳಸಿಕೊಂಡು ರ್ಯಾಂಬೊ ಏನು ಮಾಡುತ್ತಾನೆ?
Author
Anantha Kunigal
Binding
Soft Bound
Number of Pages
144
Publication Year
2025
Publisher
Avva Pustakalaya
Height
1 CMS
Length
22 CMS
Weight
100 GMS
Width
14 CMS
Language
Kannada