Product Description
ವ್ಯಕ್ತಿಯ ಬೆಳವಣಿಗೆಗೆ ಆತ್ಮವಿಶ್ವಾಸ ಅತ್ಯಂತ ಮುಖ್ಯ. ಆತ್ಮವಿಶ್ವಾಸದ ಕೊರತೆಯಿಂದ ವ್ಯಕ್ತಿ ಬದುಕಿನಲ್ಲಿ ಸೋಲು ಅನುಭವಿಸುವುದು ಅಪರೂಪವಲ್ಲ. ಆತ್ಮವಿಶ್ವಾಸ ವ್ಯಕ್ತಿಯಲ್ಲೂ ಇರಬೇಕು, ಸುತ್ತಲಿನ ಪರಿಸರವೂ ಪ್ರೋತ್ಸಾಹಿಸಿ ಅದನ್ನು ರೂಪಿಸಬೇಕು. ಬದುಕಿನಲ್ಲಿ ಸೋಲಿನ ಸನ್ನಿವೇಶಗಳು ಎದುರಾದಾಗ ಅದನ್ನು ಮೆಟ್ಟಿ ನಿಲ್ಲಬಲ್ಲ ದೃಢತೆ ಬರುವುದು ಈ ಆತ್ಮವಿಶ್ವಾಸದಿಂದಲೇ. ಕಿರಿಯರಲ್ಲಿ ಅಥವಾ ನಮ್ಮ ಸಹೋದ್ಯೋಗಿಗಳಲ್ಲಿ, ಮನೆಯ ಸದಸ್ಯರಲ್ಲಿ ಆತ್ಮವಿಶ್ವಾಸ ಹೆಚ್ಚಿಸಲು ಸಹಕರಿಸುವುದು ಸಕಾರಾತ್ಮಕ ನಡವಳಿಕೆ. ಈ ಕೃತಿಯ ಲೇಖಕರಾದ ಶ್ರೀ ಅರವಿಂದ ಚೊಕ್ಕಾಡಿಯವರು ಕೆಲವು ವ್ಯಕ್ತಿಗಳ ಉದಾಹರಣೆಗಳ ಮೂಲಕ ಆತ್ಮವಿಶ್ವಾಸ ವೃದ್ಧಿಸಿಕೊಳ್ಳುವುದು ಹೇಗೆ ಎಂಬುದನ್ನು ಇಲ್ಲಿ ಮನಮುಟ್ಟುವಂತೆ ತಿಳಿಸಿದ್ದಾರೆ.