Product Description
‘ಎಣ್ಮಕಜೆ’ ಒಂದು ಗ್ರಾಮದ ಹೆಸರು. ಜೊತೆಗೆ ಎಂಟು ಸಂಸ್ಕೃತಿಗಳ ನಾಡು ಎಂದರ್ಥ. ಕಾಸರಗೋಡು ಜಿಲ್ಲೆಗೆ ಸೇರಿದ ಈ ಗ್ರಾಮದ ಇತ್ತೀಚಿನ (ಕ್ರಿ.ಶ. 2000 ನಂತರದ) ಚರಿತ್ರೆ ಮತ್ತು ಸಂಸ್ಕೃತಿ ಈ ಕಾದಂಬರಿಯ ವಿಷಯ.
ಪರಿಸರದ ಮೇಲೆ ಬಹುರಾಷ್ಟ್ರೀಯ ಕಂಪನಿಗಳ ಪ್ರಾಯೋಜಿತ ಕೀಟನಾಶಕಗಳು ಬೀರುವ ದುಷ್ಪರಿಣಾಮಗಳನ್ನು ಈ ಕಾದಂಬರಿ ದಾರುಣವಾಗಿ ಚಿತ್ರಿಸುತ್ತದೆ. ಈಗಾಗಲೇ ಕುಖ್ಯಾತವಾಘಿರುವ ‘ಎಂಡೋಸಲ್ಫಾನ್’ ಕೀಟನಾಶಕದ ಬಳಕೆ ಈ ಪ್ರದೇಶದ ಜನರನ್ನು ಹಿಂಡಿ ಹಿಪ್ಪೆ ಮಾಡಿರುವುದು - ಮಾಡುತ್ತಿರುವುದು, ಅದಕ್ಕೆ ಆಳುವ ವರ್ಗದ ಬೆಂಬಲ, ಇದನ್ನು ವಿರೋಧಿಸುತ್ತಿರುವ ಪರಿಸರವಾದಿಗಳ ಕ್ಷೀಣದನಿ, ಸಾಮಾನ್ಯಜನರ ಅಸಹಾಯಕತೆ - ಎಲ್ಲವನ್ನೂ ಲೇಖಕ ಮಾಂಗಾಡ್ ಅವರು ಹೃದಯಸ್ಪರ್ಶಿಯಾಗಿ ವರ್ಣಿಸಿದ್ದಾರೆ.
ನಿರಂಜನರ ‘ಚಿರಸ್ಮರಣೆ’ಯ ಕೈಯ್ಯೂರಿನ ರೈತ ಹೋರಾಟದ ಹಾಗೆ, ‘ಎಣ್ಮಕಜೆ’ಯ ಪರಿಸರ ಹೋರಾಟ ದುರಂತ ಬದುಕಿನ ದಾರುಣ ಧ್ವನಿಗಳನ್ನು ಹಿಡಿದಿಟ್ಟುಕೊಳ್ಳುತ್ತಲೇ ನಮ್ಮೊಳಗಿನ ಮನುಷ್ಯನನ್ನು ಹುಡುಕುವಂತೆ ಈ ಕೃತಿ ಪ್ರೇರೇಪಿಸುತ್ತದೆ.