Product Description
ಇದು ವಚನಗಳನ್ನು ಕುರಿತ ಒಂದು ವರದಿಯಲ್ಲ; ಇದರಲ್ಲಿ ಅನೇಕ ಹೊಸ ವಿಚಾರಗಳು ಅಡಕಗೊಂಡಿವೆ. ನಿದರ್ಶನಕ್ಕೆ ವಚನಗಳ ಉಗಮದ ಬಗೆಗಿನ ಚರ್ಚೆಯನ್ನೇ ನೋಡಬಹುದು. ಬೇರಾರೂ ವ್ಯಕ್ತಪಡಿಸದ ವಿಶಿಷ್ಟ ತಾರ್ಕಿಕತೆ ಅಲ್ಲಿದೆ. ಹಾಗೆಯೇ ಹನ್ನೆರಡನೆಯ ಶತಮಾನದಲ್ಲಿ ಮೊದಲುಗೊಂಡ ಈ ರಚನಾ ಪ್ರಕಾರ, ಅದರ ಎರಡನೆಯ ಘಟ್ಟ, ಮತ್ತು ವಚನರಚನೆಯ ಆಧುನಿಕ ನೆಲೆಗಳಲ್ಲಿ ಹೇಗೆ ಮಾರ್ಪಾಟುಗೊಂಡಿದೆಯೆಂಬ ವಿವೇಚನೆಯನ್ನೂ ಇಲ್ಲಿ ಕಾಣಬಹುದು. ಕಾಲಕಾಲಕ್ಕೆ ವಚನ ಪ್ರಕಾರವು ಕನ್ನಡ ಸಾಹಿತ್ಯ ಪರಂಪರೆಯ ಮೇಲೆ ಮಾಡಿರುವ ಪ್ರಭಾವವನ್ನೂ ಇಲ್ಲಿ ಗುರುತಿಸಲಾಗಿದೆ. ಜೊತೆಗೆ, ವಚನಗಳ ಓದಿಗೆ ತನ್ನದೇ ಆದ ಮೀಮಾಂಸೆಯ ಅಗತ್ಯವಿರುವುದನ್ನೂ ಇಲ್ಲಿ ವಿಶಿಷ್ಟವಾದುದು. ಅತ್ಯಂತ ಕೆಳವರ್ಗದವನೊಬ್ಬನಲ್ಲಿ ಕಾಣಿಸಿಕೊಳ್ಳುವ ಆತ್ಮವಿಶ್ವಾಸ ಒಂದು ರೂಪಕವೇ ಆಗಿ ಮಾರ್ಪಡುತ್ತದೆ. ಅಲ್ಲದೆ, ಈ ಭಾಗದಲ್ಲಿ ವಚನ ಚಳವಳಿಯ ವಿವಿಧ ಅಂಶಗಳ ಬಗ್ಗೆ ಲೇಖನ ಅನೇಕ ಹೊಸ ಒಳನೋಟಗಳನ್ನು ಕಾಣಬಹುದು ಕೂಡ.