Quantity
Product Description
ಆನಂದಾಮೃತವನ್ನು ಓದುತ್ತಾ ಹೋದಂತೆ ಆಗುವ ಆಧ್ಯಾತ್ಮಿಕ ಅನುಭೂತಿಯು, ನಮ್ಮನ್ನು ಸಂಪೂರ್ಣ ಆವರಿಸಿಕೊಂಡು, ತತ್ಪರಿಣಾಮವಾಗಿ ನಮ್ಮ ಮನೋಪ್ರಾಣಿಕ ಸತ್ತೆಯ ಒಳ ಹೊರಗೆ ಏಕವಾದ ಸ್ಥಿತಿಯಾಗಿ ಏರ್ಪಡುವುದನ್ನು ನಾವು ಅನುಭವಿಸಬಹುದಾಗಿದೆ. ವೇದಾಂತದ ದರ್ಶನಗಳನ್ನು ಇದರಲ್ಲಿ ಬರುವ ಪ್ರತಿ ಸನ್ನಿವೇಶಗಳಲ್ಲಿ, ನಾನಾ ಘಟನೆಗಳಲ್ಲಿ, ಹಾಗು ಅನೇಕ ಪಾತ್ರಗಳಲ್ಲಿ ತೋರಿಬರುವ ಸಾಂದರ್ಭಿಕ ಸಂಭಾಷಣೆಯೊಂದಿಗೆ ಅಭಿವ್ಯಕ್ತಗೊಳ್ಳುವುದನ್ನು ಅನೇಕ ಪ್ರಸಂಗ-ಪಾತ್ರಗಳ ನಡವಳಿಕೆಗಳಲ್ಲಿ ಕಾಣಬಹುದು. ಇಲ್ಲಿ ಮಾತಿಗಿಂತಲೂ, ಮಾತಿನಿಂದಲೇ ಉದ್ಭವಿಸಿ, ಮಾತನ್ನು ಮರೆಸುವ ಮೌನವು ಹೆಚ್ಚು ಪರಿಣಾಮಕಾರಿಯಾಗಿದೆ ಎಂದೆನಿಸುತ್ತದೆ. ಮಾತು ಮೌನಕ್ಕೆ ಸಲ್ಲುವುದು ಇಲ್ಲಿನ ಬರವಣಿಗೆಯ ವಿಶೇಷವಾಗಿರುವಂತೆಯೇ, ಮೌನವೇ ಮಾತಾಗಿ ಬಿಡುವುದೂ ಸಹ ಈ ಕೃತಿಯ ಮತ್ತೊಂದು ಮಜಲೆಂದರೂ ತಪ್ಪಿಲ್ಲ
ಶುದ್ಧ ಆನಂದದ ರೂಪದಲ್ಲಿ ವಿಜ್ಞಾನವಾಗಿಯೂ, ಶುದ್ಧ ಅಮೃತದ ಸ್ವರೂಪದಲ್ಲಿ ಸುಜ್ಞಾನವಾಗಿಯೂ ಬಾಳಿದ ಮಹಾಮಹಿಮರಾದ ಶ್ರೀ ಶ್ರೀ ಶ್ರೀ ಚಿಕ್ಕಣ್ಣಾನಂದರ ಸಂತ ಬದುಕಿಗೆ ತತ್ವಂಲಿಸಿ ಎಂಬುವುದೇ ಚರಮ ತತ್ವವಾಗಿದೆ.
ಮಹಮದ್ ಖುದ್ರತ್ ಅವರ ಈ ಆನಂದಾಮೃತ ಕಥನಾಂಬರಿಯು ಸತ್ಯ, ಶಿವ ಮತ್ತು ಸೌಂದರ್ಯದ ಮಂಜುಳಗಾನವಾಗಿದೆ. ಇದು ವಾಚಕನ ಹೃದಯ ವಿಕಸನಕ್ಕೆ ನೆರವಾಗಿ ಜಗತ್ತನ್ನು ಅರಿಯುವ ಮೂಲಕ, ದಿವ್ಯಚೇತನದ ಸ್ಪರ್ಶವಾಗಿ ಜೀವನವು ಮನೋಹರವೂ ಪರಮಾನಂದವೂ ಆಗುತ್ತದೆ.
Binding
Hard Bound
Author
C R Mohamed Khudrat
Publisher
Ravindra Pusthakaalaya
Publication Year
2025
Number of Pages
584
Height
5 CMS
Width
15 CMS
Length
22 CMS
Weight
1000 GMS
Language
Kannada