ಹುಟ್ಟಿದ ಮೇಲೆ ಸಾವು ಅನಿವಾರ್ಯ ಎಂಬುದು ತಿಳಿದ ಸತ್ಯವಾದರೂ, ಸಾವು ಸಮೀಪಿಸಿದಾಗ ಗಲಿಬಿಲಿಗೊಳ್ಳದವರು ಬಹಳ ಕಡಿಮೆ ಮಂದಿ. ಈ ಹುಟ್ಟು ಸಾವು ಮನುಷ್ಯರಿಗೆ ಮಾತ್ರವಲ್ಲ, ಸಕಲ ಜೀವಿಗಳಿಗೂ ಅನ್ವಯವಾಗುತ್ತದೆ. ಹುಟ್ಟು ಸಾವಿನ ಕ್ರಿಯೆಗಳನ್ನು ವೈಜ್ಞಾನಿಕ ದೃಷ್ಟಿಯಿಂದ ಅಂದಾಜು ಮಾಡುವ ಪ್ರಯತ್ನ ಇದು. ಪ್ರತಿಯೊಂದು ಲೇಖನ ಹಲವು ವೈಜ್ಞಾನಿಕ ಸತ್ಯಗಳನ್ನು ತಿಳಿಸಿಕೊಡುತ್ತದೆ.