Product Description
ಲೇಖಕ ಸಿರಾಶ್ರೀಯವರ ಪ್ರಕಾರ R-rum G-gin V-vodka ಜೊತೆಯಾದರೆ ಅದು ಆರ್ಜಿವಿ ಎಕ್ಸೋಟಿಕ! ವೋಡ್ಕಾ ವಿತ್ ವರ್ಮ ತೆಲುಗಿನ ಕವಿ ಮತ್ತು ಪತ್ರಕರ್ತರೂ ಆಗಿರುವ ಸಿರಾಶ್ರೀಯವರ ಪುಸ್ತಕ. ಒಬ್ಬ ರಾಮ್ಗೋಪಾಲ್ವರ್ಮನ ಆಟೋಗ್ರಾಫ್ಗಾಗಿ ಮುಂಬೈನ ರಣಬಿಸಿಲಿನಲ್ಲಿ ಐದಾರು ತಾಸು ನಿಂತು, ಬರಿಗೈಲಿ ವಾಪಸ್ಸಾಗಿದ್ದ ಸಿರಾಶ್ರೀಯವರೇ ಇಂದು ಅದೇ ರಾಮ್ಗೋಪಾಲ್ವರ್ಮರ ಒಳಮರ್ಮಗಳನ್ನೆಲ್ಲಾ ನಿಮ್ಮೆದುರಿಗೆ ಬಿಡಿಸಿಟ್ಟಿರುವುದೇ ಇಲ್ಲಿನ ಕುತೂಹಲದ ಸಂಗತಿ!
ವರ್ಮರ ಸಹಜ ಪರಿಸರದಿಂದಾಚೆ ನಿಂತವರ ಕಣ್ಣುಗಳಲ್ಲಿ ಮನಸ್ಸಿನಲ್ಲಿ ಹೃದಯದಲ್ಲಿ ವ್ಯಕ್ತವಾದ ನಿಜವಾದ ಅಮೂರ್ತ ಅನುಭವಗಳನ್ನು ಪದಗಳಲ್ಲಿ ಕಟ್ಟಿಕೊಟ್ಟಿರುವ ಸಿರಾಶ್ರೀಯವರು ಪುಸ್ತಕದಲ್ಲಿ ಪ್ರಧಾನ ನಾಯಕರಾಗಿ ಕಾಣುತ್ತಾರೆ. ಸಿರಾಶ್ರೀಯವರ ಕಣ್ಣಳತೆಗೆ ದಕ್ಕಿದ ನಿಗೂಢ ವ್ಯಕ್ತಿ ವರ್ಮರ ಅಂತರಂಗ ಬಹಿರಂಗ ಈ ಪುಸ್ತಕದ ತಿರುಳು.
ಇನ್ನು, ಈ ಕೃತಿಯನ್ನು ತೆಲುಗಿನಿಂದ ಕನ್ನಡಕ್ಕೆ ರೂಪಾಂತರಿಸಿರುವ ಸೃಜನ್ ಅಮೂರ್ತವಾದ ಅನುಭವಗಳನ್ನು ಬಣ್ಣಗಳಲ್ಲಿ ಕಟ್ಟಿಕೊಡುವ ಬಹುದೊಡ್ಡ ಪ್ರತಿಭೆ. ಈಗಾಗೆಲೇ ರಾಮ್ಗೋಪಾಲ್ವರ್ಮರನ್ನು ‘ನನ್ನಿಷ್ಟ’ ಕೃತಿಯ ಮುಖಾಂತರ ಕನ್ನಡಕ್ಕೆ ಕರೆತಂದಿರುವ ಅವರು, ಈ ಬಾರಿ ಸಿರಾಶ್ರೀಯವರ ‘ವೋಡ್ಕಾ ವಿತ್ ವರ್ಮ’ ನಶೆಯನ್ನು ಹರಡುತ್ತಿದ್ದಾರೆ.