Product Description
ಯಾವುದೇ ಸಾಹಿತ್ಯ ಎತ್ತರದ ನೆಲೆಯದಾಗಬೇಕಾದರೆ ಅದರಲ್ಲಿ ಉತ್ತಮ ರೀತಿಯ ಮಕ್ಕಳ ಸಾಹಿತ್ಯವೂ ಇರಬೇಕಾಗುತ್ತದೆ. ಕನ್ನಡದಲ್ಲಿ ಪಂಜೆ, ಕುವೆಂಪು, ರಾಜರತ್ನಂ, ಹೊಯ್ಸಳರಂತ ನವೋದಯ ಸಾಹಿತಿಗಳು ಮಕ್ಕಳಿಗಾಗಿ ಉತ್ಕೃಷ್ಟ ಕವಿತೆಗಳನ್ನು ರಚಿಸಿದ್ದಾರೆ. ನಂತರ ಬಂದ ನವ್ಯ ಸಾಹಿತ್ಯದಲ್ಲಿಯೂ ವೆಂಕಟೇಶ ಮೂರ್ತಿ, ಸುಮತೀಂದ್ರ ನಾಡಿಗ ಮೊದಲಾದವರು ಈ ಸಂಬಂಧ ಶ್ಲಾಘ್ಯ ಕೆಲಸ ಮಾಡಿದ್ದಾರೆ. ಚಂದಿರ ಶಾಲೆ ಪುಸ್ತಕದಲ್ಲಿ ಮಕ್ಕಳ ಮನಸ್ಸಿಗೆ ಮುದ ನೀಡುವ ವಸ್ತು ವೈವಿಧ್ಯ ಇದೆ; ಅವರ ಕಿವಿಸೆಳೆಯುವ, ಹಗುರ ನಡಿಗೆಯ ಸುಲಭ ಸುಂದರ ರಚನೆಗಳಿವೆ. ಆನೆ ಬಂತು, ಜೋಗುಳ, ದೀಪ, ತರಕಾರಿ - ಇಂಥ ಹಲವಾರು ರೋಚಕ ಪದ್ಯಗಳು ಮಕ್ಕಳಿಗೆ ಪ್ರಿಯವಾಗಬಲ್ಲವು. ಈ ಸಂಕಲನದ ಕೆಲವು ಪದ್ಯಗಳಿಗೆ ಚಿತ್ರಗಳೂ ಇರುವುದರಿಂದ ಈ ಪುಸ್ತಕ ಇನ್ನಷ್ಟು ರಂಜಕವಾಗುವುದರಲ್ಲಿ ಸಂದೇಹವಿಲ್ಲ.