Product Description
‘ನೀರ ದಾರಿ’ ಮಹಿಳಾ ಅಧ್ಯಯನವನ್ನು ಕುರಿತ, ಅದರಲ್ಲಿಯೂ ದಲಿತ ಹೆಣ್ಣುಮಕ್ಕಳ ಜೀವನದ ಬವಣೆಗಳನ್ನು ಕುರಿತ ಅಪರೂಪದ ‘ವಾಚಿಕೆ’(ರೀಡರ್). ಕನ್ನಡದಲ್ಲಂತೂ ಇದು ಮೊಟ್ಟಮೊದಲ ಮತ್ತು ಬಹಳ ಬೆಲೆಬಾಳುವ ಕೆಲಸ. ಹಲವು ಬಗೆಯ ನಿರೂಪಣೆಗಳ (ಡಿಸ್ಕೋರ್ಸ್) ಕೊಲಾಜ್ ಆಗಿ ಮೂಡಿಬಂದಿರುವ ಈ ಪುಸ್ತಕ ತುಂಬ ವಿಶಿಷ್ಟವಾದ ಪರಿಣಾಮವನ್ನು ಬೀರುತ್ತದೆ. ಇದರ ಒಂದು ಮುಖ್ಯ ಗುಣವೆಂದರೆ ಅನುಭವ ನಿರೂಪಣೆ, ಜೀವನ ಕಥನ, ಕರಾರುವಾಕ್ಕಾದ ಅಧ್ಯಯನಗಳ ಫಲಿತಾಂಶಗಳು ಮತ್ತು ಸ್ವತಂತ್ರವಾದ ಆಲೋಚನೆಗಳನ್ನು ಜೋಡಿಸಿಕೊಟ್ಟಿರುವ ಬಗೆ. ಇಲ್ಲಿ ಸಂಪಾದಕರ ಸೃಜನಶೀಲತೆ ಮತ್ತು ಸ್ವಾನುಭವಗಳು ಒಳ್ಳೆಯ ಕೆಲಸ ಮಾಡಿವೆ.
ಈ ಪುಸ್ತಕವನ್ನು ಒಂದು ಕಾದಂಬರಿಯ ಹಾಗೆ ನಿರಂತರವಾಗಿ ಓದುವುದು ಸರಿಯಲ್ಲ. ಬದಲಾಗಿ ಇಲ್ಲಿನ ಬರಹಗಳನ್ನು ಸವಡು ಸಿಕ್ಕಾಗೆಲ್ಲ ಬಿಡಿಬಿಡಿಯಾಗಿ ಒಳಗೆ ತೆಗೆದುಕೊಳ್ಳಬೇಕು. ಇಲ್ಲವಾದರೆ ಪುನರುಕ್ತಿಗಳ ಫಲವಾಗಿ ಉಂಟಾಗುವ ದಣಿವು, ಲೇಖನಗಳ ಮಹತ್ವವನ್ನು ಗಮನಿಸುವುದಕ್ಕೆ ಅಡ್ಡಿಯಾಗುತ್ತದೆ. ಇಂಥ ಓದನ್ನು ಈ ಚಳುವಳಿಗಳಲ್ಲಿ ತೊಡಗಿಕೊಂಡವರು, ಇವುಗಳನ್ನು ವಿರೋಧಿಸುವವರು ಮತ್ತು ಇವೆಲ್ಲದರ ಹೊರಗೆ ಉಳಿದು “ನಿಶ್ಚಿಂತೆ”ಯಾಗಿ ಜೀವಿಸುತ್ತಿರುವವರೆಲ್ಲರಿಗೂ ಇದರಲ್ಲಿ ಪಾಠಗಳಿವೆ.