Product Description
ವಿಲಿಯಂ ಶೇಕ್ಸ್ಪಿಯರ್ ಮನುಕುಲ ಕಂಡಂತಹ ಶ್ರೇಷ್ಠ ಕವಿ, ನಟ ಹಾಗೂ ನಾಟಕಕಾರ. ಈತನ ಯಾವ ನಾಟಕ ಕಥೆಯೂ ಈತನದಲ್ಲ. ಗ್ರೀಕ್, ರೋಮನ್, ಇಟಾಲಿಯನ್, ಫ್ರೆಂಚ್, ಇಂಗ್ಲಿಷ್ ಮೂಲಗಳಲ್ಲಿ ಈಗಾಗಲೇ ಪ್ರಚಲಿತದಲ್ಲಿದ್ದ ಕಥನಗಳನ್ನು ತೆಗೆದುಕೊಂಡನು. ನಾಟಕದ ಪಾತ್ರಗಳು ತಮ್ಮ ಅಂತರಂಗವನ್ನು ಸ್ವಗತ ಸಂಭಾಷಣೆ (ಸಾಲೆಲೆಕ್ಯು)ಗಳ ಮೂಲಕ ತೆರೆದಿಡುವ ತಂತ್ರವನ್ನು ಶೇಕ್ಸ್ಪಿಯರ್ ಸಮರ್ಪಕವಾಗಿ ಬಳಸಿದನು. ಮನುಷ್ಯನ ಚಿತ್ತವ್ಯಾಪಾರದ ಅರಿವು, ಒಳನೋಟಗಳನ್ನು ವಸ್ತುನಿಷ್ಠವಾಗಿ ಚಿತ್ರಿಸಿದನು. ಮನುಷ್ಯನ ರಾಗದ್ವೇಷಗಳು ಹೇಗೆ ಅವನ ಅವನತಿಗೆ ಕಾರಣವಾಗುತ್ತದೆ ಎನ್ನುವುದನ್ನು ಹೃದಯಂಗಮವಾಗಿ ಕಟ್ಟಿಕೊಟ್ಟನು. 400 ವರ್ಷಗಳಾದರೂ ಈತನ ನಾಟಕಗಳು ಇಂದಿಗೂ ನವನವೀನ. ಶೇಕ್ಸ್ಪಿಯರ್ ಪಾತ್ರಗಳನ್ನು ಅನ್ವೇಷಿಸುವುದರ ಮೂಲಕ ಇಂದಿಗೂ ನಮ್ಮನ್ನು ನಾವು ಹುಡುಕಿಕೊಳ್ಳಬಹುದು. ತನ್ನ ಸುನೀತಗಳಲ್ಲಿ ಕಾಲ, ಪ್ರೀತಿ, ಸೌಂದರ್ಯ ಮತ್ತು ಸಾವುಗಳನ್ನು ಅನಾವರನಗೊಳಿಸುವ ಪರಿ ಅದ್ಭುತವಾದದ್ದು. ಶೇಕ್ಸ್ಪಿಯರನ ಅಧ್ಯಯನದ ಮೂಲಕ ನಮ್ಮ ಆತ್ಮೋನ್ನತಿಯನ್ನು ಮಾಡಿಕೊಳ್ಳಬಹುದು.