Quantity
Product Description
ನನ್ನ ಹೆಸರು ಗೌಹರ್ ಜಾನ್, ಭಾರತೀಯ ಸಂಗೀತದ ಆರಂಭಿಕ ಧ್ವನಿಮುದ್ರಣಗಳು ಹಾಡಿನ ಕೊನೆಯಲ್ಲಿ ಮಾಡಿದ ಉಚ್ಚ ಸ್ವರದ ಘೋಷಣೆಯಿಂದ ಗುರುತಿಸಲ್ಪಟ್ಟಿವೆ. ಗಾಯಕಿಯ ಈ ಘೋಷಣೆಯು ಭಾರತೀಯ ಸಂಗೀತದ ಇತಿಹಾಸದಲ್ಲಿ ಒಂದು ಮೈಲಿಗಲ್ಲನ್ನು ಪ್ರತಿನಿಧಿಸುತ್ತದೆ. ಅದು ಭಾರತೀಯ ಸಂಗೀತದ ವಿಷಯ, ರಚನೆ ಮತ್ತು ಪ್ರಸ್ತುತಿಯ ಶೈಲಿಯನ್ನು ಶಾಶ್ವತವಾಗಿ ಬದಲಾಯಿಸುತ್ತದೆ. ಐಲೀನ್ ಏಂಜಲಿನಾ ಯೋವರ್ಡ್ ಎಂಬ ಹೆಸರಿನಿಂದ ಜನಿಸಿದ ಅವರು, ನಂತರ ಇಸ್ಲಾಮಿಗೆ ಮತಾಂತರಗೊಂಡ ಅಮೆರಿಕನ್ ಕ್ರಿಶ್ಚಿಯನ್.
ಗೌಹರ್ ಜಾನ್ (1873-1930) ಅತ್ಯುತ್ತಮ ಸಂಗೀತ ಪ್ರದರ್ಶನವನ್ನು ನೀಡುತ್ತಿದ್ದ ನೈಜ ಪ್ರತಿಭಾನ್ವಿತ ಸಂಗೀತಗಾರ್ತಿ ಧ್ವನಿಮುದ್ರಣದ (ರೆಕಾರ್ಡಿಂಗ್) ತಂತ್ರಜ್ಞಾನದ ಆಗಮನದೊಂದಿಗೆ ದೊರೆತ ಅವಕಾಶವನ್ನು ಗರಿಷ್ಠ ಮಟ್ಟದಲ್ಲಿ ಸದುಪಯೋಗ ಮಾಡಿಕೊಂಡ ಆರಂಭಿಕ ಮಹಿಳಾ ಕಲಾವಿದರಲ್ಲಿ ಒಬ್ಬರಾದ ಅವರ ಧ್ವನಿ 1902ರಲ್ಲಿ ಧ್ವನಿಮುದ್ರಿತವಾದ ಮೊದಲ ಭಾರತೀಯ ಧ್ವನಿಯಾಗಿದೆ. ಅವರ ವಿಶಿಷ್ಟ ವೃತ್ತಿಜೀವನದ ಅವಧಿಯಲ್ಲಿ ಸುಮಾರು 600 ಧ್ವನಿಮುದ್ರಿಕೆಗಳನ್ನು ರೆಕಾರ್ಡ್ ಮಾಡಿದ ಹೆಗ್ಗಳಿಕೆ ಗೌಹರ್ ಜಾನ್ ಅವರದು.
ಈ ಪುಸ್ತಕವು ಗೌಹರ್ ಜಾನ್ ಅವರ ಜೀವನದ ಕಥೆಯನ್ನು ಅದರ ಎಲ್ಲ ಐತಿಹಾಸಿಕ ಹಿನ್ನೆಲೆ, ದಂತಕಥೆಗಳು- ಕೆಲವು ದಾಖಲಾದುದು, ಕೆಲವು ಕಾಲ್ಪನಿಕ ಅಥವಾ ಕಟ್ಟುಕಥೆಗಳು ಜೊತೆಗೆ ಅವರು ಬದುಕಿದ್ದ ಮತ್ತು ಅತ್ಯುತ್ತಮ ಸಂಗೀತ ನೀಡಿದ ಕಾಲವನ್ನು ಗುರುತಿಸುತ್ತದೆ.
ಸಾಮಾಜಿಕ-ಸಾಂಸ್ಕೃತಿಕ ಸಂದರ್ಭವು ಹಿಂದೂಸ್ತಾನಿ ಸಂಗೀತಕ್ಕೆ ಅವರ ಕೊಡುಗೆಗಳನ್ನು ಮತ್ತು ಅದರಲ್ಲಿ ಮಹಿಳೆಯರ ಪಾತ್ರವನ್ನು ಅದೇ ದೃಷ್ಟಿಕೋನದಿಂದ ನೋಡಲು ಸಹಾಯ ಮಾಡುತ್ತದೆ. ಅವರ ಸಂಗೀತದ ಮೂಲಕ ಗೌಹರ್ ಮತ್ತು ಅವರಂತಹ ಗಾಯಕರು ಜನಪ್ರಿಯಗೊಳಿಸಿದ ಹಿಂದೂಸ್ತಾನಿ ಸಂಗೀತದ ವಿವಿಧ ಪ್ರಕಾರಗಳಾದ ರುಮಿ, ದಾದ್ರಾ ಮತ್ತು ಗಜಲ್ ಅನ್ನು ವಿಶ್ಲೇಷಿಸಲು ಇಲ್ಲಿ ಪ್ರಯತ್ನಿಸಲಾಗಿದೆ. ಈ ಪುಸ್ತಕವು ಭಾರತದಲ್ಲಿ ಧ್ವನಿಮುದ್ರಣ ಉದ್ಯಮದ ವಿಕಸನ ಮತ್ತು ಭಾರತೀಯ ಸಂಗೀತ, ರಂಗಭೂಮಿ ಮತ್ತು ಸಾಮಾಜಿಕ ಜೀವನದ ಮೇಲೆ ಅದರ ಪ್ರಭಾವವನ್ನು ಸಂಕ್ಷಿಪ್ತವಾಗಿ ಕಟ್ಟಿಕೊಡುತ್ತದೆ.
ಧ್ವನಿಮುದ್ರಿಕೆಯು (ಸಿಡಿ) ಶೆಲಾಕ್ ಡಿಸ್ಕ್ನಲ್ಲಿ ಮುದ್ರಿಸಲಾದ ಭಾರತದ ಮೊದಲ ಧ್ವನಿಯನ್ನು ಮತ್ತೊಮ್ಮೆ ಜೀವಂತ ಸೆರೆ ಹಿಡಿದು ನಮ್ಮ ಕಿವಿಗಳಿಗೆ ಇಂಪನ್ನು ನೀಡುತ್ತದೆ.
Binding
Soft Bound
Author
Vikram Sampath and Srigowri S Jyothi
Number of Pages
300
Publisher
Saahitya Prakashana (Hubbali)
Publication Year
2026
Height
4 CMS
Length
22 CMS
Weight
500 GMS
Width
14 CMS
Language
Kannada