Quantity
Product Description
ಪ್ರತಿಭೆ ರಕ್ತದಲ್ಲಿ ಹರಿದು ಬರುವುದಿಲ್ಲ; ರಕ್ತದಲ್ಲಿ ಬರುವುದಾದರೆ ಅದು ಸಕ್ಕರೆ ಖಾಯಿಲೆ ಮಾತ್ರ" ಎಂಬ ಹಾಸ್ಯಮಿಶ್ರಿತ ನುಡಿಯಿದೆ. ಆದರೆ ಎಸ್.ವಿ. ರಾಜೇಂದ್ರಸಿಂಗ್ ಬಾಬು ಅವರ ವೃತ್ತಿಬದುಕಿನೊಳಗೆ ಇಣುಕಿದಾಗ ಈ ಮಾತು ಅಸತ್ಯದಂತೆ ತೋರುತ್ತದೆ. ಬಾಬು ಅವರ ನಡಿಗೆಯಲ್ಲಿದೆ ಪಿತೃಪರಂಪರೆಯ ಗಂಭೀರತೆ; ಮನಸ್ಸಿನಲ್ಲಿದೆ ದೃಶ್ಯಕಲೆಯ ಚಿತ್ರಲೋಕ. ಕನ್ನಡ ವಾಕ್ಷಿತ್ರದ ಪಯಣಕ್ಕೆ ತೊಂಬತ್ತೊಂದು ವರ್ಷ. ದೇಶ ಸ್ವಾತಂತ್ರ್ಯ ಪಡೆದ ವರ್ಷವೇ ಶಂಕರ್ಸಿಂಗ್ ಅವರ ಮಹಾತ್ಮ ಪಿಕ್ಚರ್ಸ್ ಜನಿಸಿ ಅನೇಕ ಕಲಾಕೃತಿಗಳನ್ನು ಕನ್ನಡಚಿತ್ರರಂಗಕ್ಕೆ ಕೊಡುವ ಮೂಲಕ ಬೆಳಕಿನ ದೀಪವಾಗಿ ಪ್ರಜ್ವಲಿಸಿತು. ಆ ದೀಪದ ಜ್ಯೋತಿ ಇಂದು ಬಾಬು ಅವರ ರೂಪದಲ್ಲಿ ಇನ್ನೂ ತೇಜಸ್ಸು ಪಡೆದುಕೊಂಡಿದೆ. ಐವತ್ತು ವರ್ಷಗಳ ಹಿಂದೆ 'ನಾಗಕನ್ಯ'ಯಿಂದ ಆರಂಭಿಸಿ ನಾಗರಹೊಳೆ, ಅಂತ, ಬಂಧನ, ಮಹಾಕ್ಷತ್ರಿಯ, ಹೂವು ಹಣ್ಣು, ಮುಂಗಾರಿನ ಮಿಂಚು, ಕುರಿಗಳು ಸಾರ್ ಕುರಿಗಳು ಇತ್ಯಾದಿ, ಪ್ರತಿ ಚಿತ್ರವೂ ಬಾಬು ಅವರ ಕಲ್ಪನೆ, ಕೌಶಲ್ಯ, ಹೃದಯಸ್ಪರ್ಶಿ ನಿರೂಪಣೆ, ಮಾನವೀಯತೆಯ ನೋಟವನ್ನು ಹೊತ್ತಿದೆ. ಕಾವ್ಯದಂತೆ ಮಾತನಾಡುವ ಅವರ ಚಿತ್ರಗಳು, ಜನಜೀವನದ ಸಂಗತಿಗಳನ್ನು ವಿಜೃಂಭಿಸಿವೆ. ಕೇವಲ ಚಿತ್ರನಿರ್ದೇಶಕನಾಗಷ್ಟೇ ಅಲ್ಲ, ಚಿತ್ರರಂಗದ ಹಿತಕ್ಕಾಗಿ ಹೋರಾಡುವ ಹೃದಯವಂತನಾಗಿ, ಬಾಬು ಅವರ ಪಯಣ ಅಪರೂಪದ್ದು. ಅವರ ಪ್ರತಿಭೆ ಕೇವಲ ಪರದೆಯ ಸೀಮೆಯಲ್ಲ, ಅದು ಸಮಾಜಮುಖಿಯೂ ಹೌದು. ಈಗ ಅವರು ತಮ್ಮ ಎಪ್ಪತ್ತೈದನೆಯ ವಯಸ್ಸಿನ ಸುವರ್ಣ ಸಂಭ್ರಮದ ದೀಪ ಹಚ್ಚುವ ಜೊತೆ ಜೊತೆಯಲ್ಲೇ ವೃತ್ತಿಬದುಕಿನ ಬೆಳ್ಳಿಹಬ್ಬವನ್ನೂ ಆಚರಿಸಿ ಕೊಳ್ಳುತ್ತಿದ್ದಾರೆ. ಅವರ ಬದುಕಿನ ಚಲನಶೀಲತೆ, ಶ್ರದ್ದೆ, ಅಚಲ ಕೃತನಿಷ್ಠೆ ಮುಂದಿನ ಪೀಳಿಗೆಗೆ ಮಾದರಿ
Author
Gangadhara Mudaliar
Binding
Soft Bound
Number of Pages
128
Publication Year
2025
Publisher
Veeraloka Books Pvt Ltd
Height
1 CMS
Length
22 CMS
Weight
100 GMS
Width
14 CMS
Language
Kannada