Select Size
Quantity
Product Description
ಸಂಸಾರ ಸಾಗರದಲ್ಲಿ ಮುಳುಗಿರುವ ಜೀವಾತ್ಮಗಳಿಗೆ ಹಲವಾರು ದ್ವಂದ್ವಗಳು, ಕಷ್ಟ ಕಾರ್ಪಣ್ಯಗಳು. ಯಾವುದು ಸರಿ; ಯಾವುದು ತಪ್ಪು ಎಂಬ ಸಹಜ ಸಂಶಯಗಳು. ಸರಿಯಾದ ತಿಳಿವಳಿಕೆ ಇಲ್ಲದೆ ಆಗುವ ಎಡವಟ್ಟುಗಳು. ಒಮ್ಮೆ ಸರಿಯಾಗಿ ಕಂಡಿದ್ದು ಮತ್ತೊಮ್ಮೆ ತಪ್ಪು ಎನಿಸುವ ಸಂದರ್ಭಗಳು. ಕ್ಲಿಷ್ಟಕರ ಮನಸ್ಥಿತಿಯಲ್ಲಿ ಸಂತೋಷ, ನೆಮ್ಮದಿಗಳು ಮರೀಚಿಕೆಯಾಗುವಂತಹ ಪರಿಸ್ಥಿತಿ. ಯಾಕೆ ಈ ರೀತಿ ಆಗುತ್ತದೆ? ಯಾವ ರೀತಿ ಈ ಎಲ್ಲ ಜಂಜಾಟಗಳನ್ನು ನಿಭಾಯಿಸುವುದು? ಇವುಗಳಿಂದ ಬಿಡುಗಡೆ ಹೇಗೆ? ನೆಮ್ಮದಿಯ ಬದುಕಿನ ದಾರಿ ಎತ್ತ ಸಾಗುತ್ತದೆ? ಈ ಜೀವನದ ಧ್ಯೇಯ ಏನು? ಎಂಬೆಲ್ಲಾ ಪ್ರಶ್ನೆಗಳಿಗೆ ಪರಮಾತ್ಮ ಅನುಗ್ರಹಿಸಿದ ಸರಳ ದಾರಿಯೇ ಈ ಗೀತೋಪದೇಶ.
ತಮ್ಮ ಜೀವನವನ್ನು ನರಕವನ್ನಾಗಿ ಮಾಡಿದ ಕೌರವರನ್ನು ಯುದ್ಧದಲ್ಲಿ ಕೊಲ್ಲಬೇಕಾದ ಸಮಯ ಬಂದಾಗ ಅಧೀರನಾದ ಅರ್ಜುನನಿಗೆ ಪರಮಾತ್ಮನು ತೋರಿದ ದಾರಿಯೇ ಈ ಗೀತೋಪದೇಶ. ಅರ್ಜುನನ ಅಧೀರತೆ ನೆಪ ಮಾತ್ರ. ಸಮಸ್ತ ಜೀವ ಜಾತಿಗಳಿಗೆ ಅಭ್ಯುದಯದ ದಾರಿಯನ್ನು ಕರುಣಿಸಲು ಪರಮಾತ್ಮನು ಆಡಿದ ನಾಟಕ. ಸರ್ವ ನಿಯಾಮಕನಾದ ಭಗವಂತ ಯಾವ ರೀತಿಯಲ್ಲಿ ಜೀವಿಗಳನ್ನು ಉದ್ಧರಿಸುತ್ತಾನೆ ಎಂಬುದರ ಸೂಕ್ಷ್ಮ, ಸಂಕ್ಷಿಪ್ತ ಪರಿಚಯವೇ ಈ ಗೀತೋಪದೇಶ
Weight
600 GMS
Width
15 CMS
Height
4 CMS
Length
22 CMS
ISBN-13
9788196026837
Publication Year
2023
Author
Suresh Vasudev Bhagavatha
Binding
Soft Bound
Number of Pages
608
Publisher
Panchami Media Publications
Language
Kannada